ರೇಣುಕಾ ಸ್ವಾಮಿ‌ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ನಟ ದರ್ಶನ್ ಅವರನ್ನು ಬೇಟಿಯಾಗಲು‌ ಸಿನಿಮಾ ಕ್ಷೇತ್ರದ ಅನೇಕ ನಟ ನಟಿಯರು ಆಗಮಿಸುತ್ತಿದ್ದು. ಹಾಸ್ಯನಟ ಸಾಧು ಕೋಕಿಲ ಅವರು ದಾಸನನ್ನ ಬೇಟಿಯಾಗಲು ಆಗಮಿಸಿದ್ದು ಅದೇಕೋ ದರ್ಶನ್ ಸಾಧುವನ್ನು ಭೇಟಿ ಮಾಡಲಿ ನಿರಾಕರಿದ್ದರು ಆದರೇ ಪಟ್ಟುಬಿಡದ ಕೋಕಿಲ ಕೊನೆಗೂ ದಾಸನನ್ನು ಬೇಟಿ ಮಾಡಿ ಮಾಡಿ ಮಾದ್ಯಮದ ಮುಂದೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ ,

ಮೊನ್ನೆ ದರ್ಶನ್​ ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ, ನಮ್ಮ ಸ್ನೇಹಿತರು ಮತ್ತು ಹತ್ತಿರದ ಆಪ್ತರು ಭೇಟಿಗೆ ಬರಬೇಕಾಗಿದ್ದ ಕಾರಣ ಆದ್ದರಿಂದ ನಾನು ವಾಪಾಸ್​ ಹಿಂದಿರುಗಿದೆ. ಆದರೇ ಇಂದು ದರ್ಶನ್​ರನ್ನ ಭೇಟಿ ಮಾಡಿದ್ದೇನೆ ಎಂದು ಹಾಸ್ಯನಟ ಸಾಧುಕೋಕಿಲ ಅವರು ಹೇಳಿದರು.

ಪರಪ್ಪನ ಅಗ್ರಹಾರದ ಬಳಿ ಮಾದ್ಯಮದವರೊಂದಿಗೆ ಮಾತನಾಡಿದ ಹಾಸ್ಯನಟ ಸಾಧು, ಜೈಲಿನಲ್ಲಿ ನಟ ದರ್ಶನ್​ ಕೂಲ್​ ಆಗಿ ಕಾಮ್​ ಆಗಿ ಇದ್ದಾರೆ, ಬುಕ್ಸ್​ ಓದುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಅವರನ್ನು ನೋಡಿ ನಮಗೂ ಸ್ವಲ್ಪ ನೆಮ್ಮದಿಯಾಯಿತು. ದರ್ಶನ್​ ಅವರ ಮೊದಲನೇ ಸಿನಿಮಾ ಮೆಜೆಸ್ಟಿಕ್​ ನಿಂದ ಇಲ್ಲಿಯವರೆಗೆ ಹಲವು ಸಿನಿಮಾಗಳನ್ನು ನಾವಿಬ್ಬರೂ ಜೊತೆಯಾಗೆ ಮಾಡಿಕೊಂಡು ಬಂದಿದ್ದೇನೆ. ದರ್ಶನ್​ ವ್ಯಕ್ತಿತ್ವ ಹಾಗೂ ಆತ್ಮೀಯತೆ ಏನು ಅಂತ ನನಗೆ ಚನ್ನಾಗಿ ಗೊತ್ತಿದೆ. ಒಬ್ಬ ಒಳ್ಳೆಯ ಬ್ರದರ್ ಆಗಿ ಇಂದು ಅವರನ್ನು ಭೇಟಿ ಮಾಡಿದ್ದೇನೆ ಎಂದರು.

ನಟ ದರ್ಶನ್ ಆವರ ಆರೋಗ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ಆರೋಗ್ಯವಾಗಿದ್ದಾರೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಅನಾರೋಗ್ಯಕ್ಕೀಡಾದರೇ ಒಳಗೆ ಡಾಕ್ಟರ್​ ಸೇರಿ ಎಲ್ಲಾ ರೀತಿಯ ಸವಲತ್ತುಗಳು ಇವೆ. ಜೈಲಿನವರಿಗೂ ಅವರದ್ಧೇ ಆದ ರೂಲ್ಸ್​ ಇರುತ್ತದೆ. ಅದರ ಪ್ರಕಾರ ಏನ್​ ಮಾಡಬೇಕೋ ಅದನ್ನು ಮಾಡ್ತಾರೆ ಎಂದರು. ಅಭಿಮಾನಿಗಳು ಸಮಾಧಾನವಾಗಿ ಇರಬೇಕು, ಅಭಿಮಾನಿಗಳು ಸಮಾಧಾನವಾಗಿದ್ದರೇ ಮಾತ್ರ ದರ್ಶನ್​ ಅವರು ಆರಾಮಾಗಿ ಇರ್ತಾರೆ ಎಂದಿದ್ದಾರೆ, ಇಲ್ಲವಾದರೇ ಟೆಂಕ್ಷನ್ ಆಗ್ತಾರೆ ಎಂದರು.

Leave a Reply

Your email address will not be published. Required fields are marked *