ಭ್ರಷ್ಟರಹಿತ ಆಡಳಿತ ಕೊಡ್ತೀವಿ ಅಂದಿದ್ರಲ್ಲ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ, ಇವಾಗ ಶಿವಕುಮಾರ್ಗೆ ಭ್ರಷ್ಟಾಚಾರ ಕುರಿತು ತನಿಖೆಗೆ ಕೋರ್ಟ್ ಆದೇಶಿಸಿದೆ. ಇದಕ್ಕೆ ಏನು ಉತ್ತರ ಕೊಡ್ತೀರಾ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿವಕುಮಾರ್ ಮೇಲೆ ತನಿಖೆಗೆ ಆದೇಶ ಬಂದಿದೆ. ಅದಕ್ಕಾಗಿ ಡಿಕೆಶಿ ರಾಜೀನಾಮೆ ಕೊಡಬೇಕು. ಅವರಿಗೆ ನೈತಿಕತೆ, ಪ್ರಾಮಾಣಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಬೇಕು. ಶಾಸಕ ಹರೀಶ್ ಪೂಂಜಾ ಹೋರಾಟ ಮಾಡಿದ್ದಕ್ಕೆ ಅವರ ಮೇಲೆ FIR ಮಾಡಿದ್ದಾರೆ. ಅರಣ್ಯ ಪ್ರದೇಶ ಅಂತಾ ಅವರನ್ನು ಅಲ್ಲಿಂದ ಖಾಲಿ ಮಾಡಿಸಿದ್ದು ಸರಿಯಲ್ಲ.
ಶಾಸಕರ ಹಕ್ಕನ್ನು, ಸ್ವಾತಂತ್ರ್ಯವನ್ನ ಹತ್ತಿಕ್ಕುವ ಕೆಲಸ ಮಾಡ್ತಿದ್ದಾರೆ. ಸರ್ಕಾರದ ತಪ್ಪು ನಿರ್ಧಾರಗಳ ಬಗ್ಗೆ ಹೋರಾಟ ಮಾಡುವ ಸ್ವಾತಂತ್ರ್ಯ ಇಲ್ವಾ?. ಹರೀಶ್ ಪೂಂಜಾ ಮೇಲಿನ FIRನ್ನ ವಾಪಸ್ಸು ಪಡೀಬೇಕು ಎಂದು ಆಗ್ರಹಿಸಿದ್ದಾರೆ.