ಬರಗಾಲದ ನಡುವೆಯೂ ತಮಿಳುನಾಡಿಗೆ ಪ್ರತಿದಿನ 2600 ಕ್ಯೂಸೆಕ್ಸ್ ನೀರು ಬಿಡುವಂತೆ ಕೇಂದ್ರ ಕಾವೇರಿ ನದಿ ನೀರು ಹಂಚಿಕೆ ನ್ಯಾಯಾಧೀಕರಣ ಸೂಚನೆ ನೀಡಿದೆ.
ಪ್ರಸ್ತುತ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದು, 100 ಅಡಿಗಿಂತಲೂ ಕಡಿಮೆ ನೀರು ಸಂಗ್ರಹವಿದೆ. ಅಲ್ಲದೇ ಮಳೆಗಾಲದ ಅವಧಿ ಮುಗಿದಿದೆ.
ಅಕ್ಟೋಬರ್ 31ರವರೆಗೆ ಪ್ರತಿದಿನ 3000 ಕ್ಯೂಸೆಕ್ಸ್ ನೀರು ಬಿಡಲು ಸೂಚಿಸಿದ್ದ ನದಿ ನೀರು ಹಂಚಿಕೆ ನ್ಯಾಯಾಧೀಕರಣ ಇದೀಗ ಮತ್ತೆ 15 ದಿನಗಳ ಕಾಲ ಪ್ರತಿದಿನ 2600 ಕ್ಯೂಸೆಕ್ಸ್ ನೀರು ಬಿಡುವಂತೆ ಸೂಚಿಸಿದೆ.