ಆಂಧ್ರಪ್ರದೇಶದ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಅವರನ್ನು ಹತ್ಯೆಗೈಯುವ ಪ್ಲಾನ್ ಮಾಡಿರುವುದಾಗಿ ಗುಪ್ತಚರ ಇಲಾಖೆಗಳು ಎಚ್ಚರಿಕೆಯನ್ನು ನೀಡಿದೆ ಎಂಬ ಸುದ್ದಿಗಳು ಎಲ್ಲೆಡೆ ಕೇಳಿಬರುತ್ತಿವೆ. ಆಂಧ್ರದ ಡಿಸಿಎಂ ನಟ ಪವನ್ ಕಲ್ಯಾಣ್ ಜನಸೇನಾ ಪಕ್ಷದಿಂದ ಪಿಠಾಪುರಂ ಎಂಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮಾತ್ರವಲ್ಲದೇ ಜನಸೇನಾ ಪಕ್ಷದಿಂದ ಗೆದ್ದಂತಹ ಎಲ್ಲಾ ಅಭ್ಯರ್ಥಿಗಳು ಗೆಲುವಿನ ದಾಖಲೆ ನಿರ್ಮಿಸಿದ್ದಾರೆ. ಸದ್ಯ ಆಂಧ್ರ ಪ್ರದೇಶ ಸರ್ಕಾರದ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ ಅವರ ಜೀವಕ್ಕೆ ಅಪಾಯವಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹಿಂದೆ ಪವನ್ ಕಲ್ಯಾಣ್ ರವರೂ ಸ್ವತಃ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಪ್ರಚಾರದ ಸಮಯದಲ್ಲಿ ಹೇಳಿದ್ದರು.
ಕೆಲವು ತಿಂಗಳ ಹಿಂದೆಯಷ್ಟೆ ಕಳೆದ ಸಾಲಿನಲ್ಲಿ ಆಡಳಿತ ನಡೆಸುತ್ತಿದ್ದ ವೈ.ಎಸ್.ಆರ್.ಪಿ ಸರ್ಕಾರದ ವಿರುದ್ದ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಭರ್ಜರಿ ಗೆಲುವನ್ನು ಸಾಧಿಸಿದ ಭರದಲ್ಲಿ ವೈ.ಎಸ್.ಆರ್.ಪಿ ಪಕ್ಷವನ್ನು ಧೂಳಿಪಟ ಮಾಡಿತ್ತು. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಜನಸೇನಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಲ್ಲಾ ಅಭ್ಯರ್ಥಿಗಳು ಜಯಗಳಿಸಿ ದಾಖಲೆ ನಿರ್ಮಾಣ ಮಾಡಿದರು. ಇನ್ನೂ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಂತಹ ನಟ ಪವನ್ ಕಲ್ಯಾಣ್ ಸಹ ಭಾರಿ ಮತಗಳ ಅಂತರದಿಂದ ಜಯ ಗಳಿಸಿದ್ದರು. ಇದೀಗ ಪವನ್ ಕಲ್ಯಾಣ್ ರವರ ಹತ್ಯೆಗೆ ಕೆಲ ಕಿಡಿಗೇಡಿಗಳು ಸ್ಕೆಚ್ ಹಾಕಿದ್ದಾರೆ ಎಂಬ ವಿಚಾರವಾಗಿ ನಟ ಕಲ್ಯಾಣ್ ಅವರು ಎಲ್ಲಿಗೆ ಹೋದರು ಕೂಡ ಹೆಚ್ಚಿನ ಭದ್ರತೆ ನೀಡಬೇಕು ಜೊತೆಗೆ ಅವರು ತುಂಬಾ ಎಚ್ಚರದಿಂದ ಇರಬೇಕು ಎಂದು ಗುಪ್ತಚರ ಇಲಾಖೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಖ್ಯಾತ ಮಾದ್ಯಮ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ ಎನ್ನಲಾಗ್ತಿದೆ.
ಇನ್ನೂ ಈ ವಿಚಾರವನ್ನು ಜನಸೇನಾ ಪಕ್ಷ ಸಹ ಖಚಿತಪಡಿಸಿದೆ ಅಂತಲು ಕೂಡ ಹೇಳಲಾಗ್ತಿದೆ. ಪವನ್ ಕಲ್ಯಾಣ್ ರವರಿಗೆ z plus ಭದ್ರತೆ ನೀಡಬೇಕೆಂದು ಸರ್ಕಾರಕ್ಕೆ ಜನಸೇನಾ ಪಕ್ಷ ಬೇಡಿಕೆಯಿಟ್ಟಿದೆ ಎನ್ನಲಾಗಿದೆ. ಇದೀಗ ಗುಪ್ತಚರ ಇಲಾಖೆಗೂ ಈ ಕುರಿತು ಮಾಹಿತಿ ಬಂದಿದ್ದು, ಪವನ್ ಕಲ್ಯಾಣ್ ರವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. ನಟ ಪವನ್ ಕಲ್ಯಾಣ್ ರಾಜಕೀಯ ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿದ್ದಾರೆ ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದೊಂದಿಗೂ ಸಹ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ. ಈ ಕಾರಣಗಳಿಂದ ಅವರ ವಿರೋಧಿಗಳು ಪವನ್ ಕಲ್ಯಾಣ್ ರವರನ್ನು ಕೊಲೆ ಮಾಡಲು ಪ್ಲಾನ್ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಈ ಸುದ್ದಿ ಆಂಧ್ರ ಪ್ರದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ.