ಪ್ರವಾಸಿಗರಿಗೆ ಅತಿ ನೆಚ್ಚಿನ ಪ್ರವಾಸಿ ತಾಣವಾದ ನಂದಿಬೆಟ್ಟವನ್ನು ವೀಕ್ಷಿಸಲು ಸಾವಿರಾರು ಮಂದಿ ಪ್ರವಾಸಿಗರು ಕಾರು ಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದು, ಮತ್ತನೇಕರು ಬಸ್ ಮುಖಾಂತರವು ಆಗಮಿಸಿ ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳು ಕಿಕ್ಕಿರಿದು ತುಂಬಿವೆ.
ಐತಿಹಾಸಿಕ ನಂದಿ ಬೆಟ್ಟದಲ್ಲಿ ಮಂಜಿನಾ ವಾತಾವರಣ ಎಲ್ಲರ ಮನಗೆದ್ದಿದ್ದು ನಂದಿಬೆಟ್ಟದ ಮೋಡಗಳು ಧರೆಗೆ ಇಳಿದಿವೆ ಎಂಬಂತೆ ಕಂಗೊಳಿಸುತ್ತಿದೆ,

ಈ ದೃಶ್ಯಕ್ಕೆ ಪ್ರವಾಸಿಗರೆಲ್ಲರೂ ಮನಸೋಲುವಂತಾಗಿದೆ,
ನಂದಿ ಬೆಟ್ಟವು ನೋಡುಗರಿಗೆ ಭೂಮಿ-ಆಕಾಶ ಒಂದಾದಂತಿದೆ ಎನ್ನುವ ಹಾಗೇ ಕಣ್ಣಿಗೆ ಹಬ್ಬವಾಗಿದೆ, ಇದೆಲ್ಲವು ಒಳಗೊಂಡ ನಂದಿ ಬೆಟ್ಟವು ಸ್ವರ್ಗ ಎಂಬಂತೆ ಈ ಮಳೆಗಾಲದಲ್ಲಿಯೂ ಚಿಕ್ಕಬಳ್ಳಾಪುರದಲ್ಲಿ ಕಂಡುಬಂದಂತಹ ಅದ್ಭುತ ದೃಶ್ಯ ಇದಾಗಿದೆ.

Leave a Reply

Your email address will not be published. Required fields are marked *