ಬಿಜೆಪಿಯವರು ಸುಳ್ಳ ಮಳ್ಳ ನಾಯಕರು ಎಂಬ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಬಿಜೆಪಿ MLC ಛಲವಾದಿ ನಾರಾಯಣಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಸುಳ್ಳ ಯಾರು ಮಳ್ಳ ಯಾರು ಎಂಬುದು ಗೊತ್ತಿದೆ. ಮೆತ್ತಮೆತ್ತಗೆ ಏನೇನೋ ಮಾಡುವವರನ್ನು ಮಳ್ಳ ಎಂದು ಕರೆಯುತ್ತಾರೆ. ಸಚಿವ ರಾಮಲಿಂಗಾರೆಡ್ಡಿ ಅವರೇ ಮಳ್ಳ ಯಾರು ಎಂದು ಹೇಳಿ? ಎಲ್ಲರೂ ನಿಮ್ಮನ್ನೇ ಮಳ್ಳ ಅಂತ ಹೇಳುತ್ತಿದ್ದಾರೆ. ಸುಳ್ಳ ಅಂದರೆ ಜಗತ್ತಿಗೇ ಪ್ರಸಿದ್ಧಿಯಾಗಿರೋದು ಸಿದ್ದರಾಮಯ್ಯ. ನಿಮ್ಮ ವಿಚಾರ ತಂದು ನಮಗೆ ಅಂಟಿಸಬೇಡಿ, ನಿಮ್ಮ ಪಟ್ಟ ನೀವೇ ಇಟ್ಕೊಳ್ಳಿ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಅರಿಶಿನ ಕುಂಕುಮ ಇಲ್ಲದೆ ಯಾವುದಾದರೂ ಪೂಜೆ ನೋಡಿದ್ದೀರಾ? ಸಿಎಂ ಸಿದ್ದರಾಮಯ್ಯಗೆ ಅರಿಶಿನ ಕುಂಕುಮ ಕಂಡರೆ ಆಗದೇ ಇರಬಹುದು. ಅರಿಶಿನ ಕುಂಕುಮ ಹಿಂದುತ್ವದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದ್ದಾರೆ.