ಭಾರತದ ಯುವಕರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿಕೆ ವಿವಾದ ಸೃಷ್ಟಿಸಿತ್ತು. ಆದರೆ ವಾಸ್ತವವಾಗಿ ಭಾರತೀಯರು ಎಷ್ಟು ಗಂಟೆ ಕೆಲಸ ಮಾಡುತ್ತಾರೆ ಎಂಬ ಬಗ್ಗೆ ವರದಿ ಪ್ರಕಟವಾಗಿದೆ.
ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ನಡೆಸಿದ ಸಮೀಕ್ಷೆ ಪ್ರಕಾರ ಭಾರತೀಯರು ವಾರದಲ್ಲಿ 47.7 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಅವಧಿ ಕೆಲಸ ಮಾಡುವ ದೇಶಗಳ ಪಟ್ಟಿಯಲ್ಲಿ ಅಗ್ರ 7ನೇ ಸ್ಥಾನ ಪಡೆದಿದೆ.
ಕತಾರ್, ಕಾಂಗೊ, ಲೆಸೊಥೋ, ಭೂತಾನ್, ಗಾಂಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲಿ ಭಾರತಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡುವ ದೇಶಗಳಾಗಿವೆ. ಆದರೆ ಈ ದೇಶಗಳಲ್ಲಿ ಬಹುತೇಕ ದೇಶಗಳು ಅತ್ಯಂತ ಬಡ ದೇಶಗಳಾಗಿವೆ.
ಆರ್ಥಿಕವಾಗಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತ ಅಗ್ರಸ್ಥಾನದಲ್ಲಿದೆ. ಅತ್ಯಂತ ಕಡಿಮೆ ಅವಧಿ ಕೆಲಸ ಮಾಡುವ ದೇಶಗಳಲ್ಲಿನ ಕಾರ್ಮಿಕರು ಅತೀ ಹೆಚ್ಚು ವೇತನ ಪಡೆಯುತ್ತಿದ್ದಾರೆ.
ಭಾರತದಲ್ಲಿ ಅತೀ ಹೆಚ್ಚು ಅವಧಿ ಕೆಲಸ ಮಾಡಿಸಿಕೊಂಡರೂ ಕಾರ್ಮಿಕರ ತಲಾ ಆದಾಯ ಅಗ್ರ 10 ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಆಗಿದೆ.
ಫ್ರಾನ್ಸ್ ನಲ್ಲಿ ಅತ್ಯಂತ ಕಡಿಮೆ ಅವಧಿ ಅಂದರೆ ವಾರಕ್ಕೆ 30.1 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ಆದರೆ ಅವರ ತಲಾ ಆದಾಯ 55,493 ಡಾಲರ್ (46,16,620 ರೂ.) ಆಗಿದೆ.