ಜೆರುಸೆಲೀಂ: ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಅವರ ಪ್ರಕಾರ ತಾವು ಭಯೋತ್ಪಾದನೆ ವಿರುದ್ಧ ಸದಾ ಬೆಂಬಲ ವ್ಯಕ್ತಪಡಿಸುತ್ತೇವೆ.
ಮಂಗಳವಾರ ರಾತ್ರಿ ಗಾಜಾದಲ್ಲಿರುವ ಆಸ್ಪತ್ರೆಯಲ್ಲಿ ದಾಳಿ ನಡೆದಿರುವುದು ಇಸ್ರೇಲ್ನ ಜಿಹಾದ್ ಉಗ್ರರ ಗುಂಪನಿಂದ ಎನ್ನಲಾಗುತ್ತಿದೆ. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸರ್ಕಾರ ಇಸ್ರೇಲ್ ಗಾಜಾದಲ್ಲಿರುವ ಪ್ಯಾಲೆಸ್ಟೈನ್ರನ್ನು ಗುರಿಯಾಗಿಸಿಕೊಂಡು ಹಮಾಸ್ ಮೇಲೆ ದಾಳಿ ನಡೆಸಿರುವುದನ್ನು ಖಂಡಿಸಿದೆ.
ಬುಧವಾರ ಆಸ್ಪತ್ರೆ ಮೇಲೆ ದಾಳಿ ಮಾಡಿರುವುದರಿಂದ ೫೦೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದನ್ನು ಖಂಡಿಸಿರುವ ಈಜಿಪ್ಟ್ ಮಾನವೀಯತೆಯಿಂದ ಗಾಜಾಗೆ ಸಹಾಯ ಮಾಡುವುದಾಗಿ ತಿಳಿಸಿದೆ. ಆಸ್ಪತ್ರೆ ಸ್ಫೋಟಿಸಿರುವ ಬಗ್ಗೆ ವೈಟ್ಹೌಸ್ ಹೇಳಿರುವಂತೆ ಗಾಜಾದಲ್ಲಿರುವ ಭಯೋತ್ಪಾದಕ ಗುಂಪು ಈ ದಾಳಿ ನಡೆಸಿದೆ ಎನ್ನಲಾಗಿದೆ.