ಜೆರುಸೆಲೇಂ: ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ನಡೆದ ರಾಕೆಟ್ ದಾಳಿಗೆ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ಜಾಯ್ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಪ್ಯಾಲೆಸ್ಟೈನ್ ಜನರಿಗೆ ೨.೫ ಕೋಟಿ ರೂ. ದೇಣಿಗೆಯನ್ನು ಅವರು ಘೋಷಿಸಿದ್ದಾರೆ.
ಈ ಕುರಿತು ವೀಡಿಯೋ ಸಂದೇಶವನ್ನು ಬಿಡುಗಡೆ ಮಾಡಿರುವ ಮಲಾಲಾ, ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಮೇಲೆ ಬಾಂಬ್ ದಾಳಿಯಿಂದ ಗಾಬರಿಯಾಗಿದೆ. ಈ ಕೃತ್ಯವನ್ನು ನಿರ್ವಿವಾದವಾಗಿ ಖಂಡಿಸುತ್ತೇನೆ. ಇಸ್ರೇಲ್ ಪ್ಯಾಲೆಸ್ಟೈನ್ ಮತ್ತು ಪ್ರಪಂಚದಾದ್ಯಂತ ಶಾಂತಿಯನ್ನು ಬಯಸುವ ಜನರೊಂದಿಗೆ ತಾನು ಸೇರುತ್ತೇನೆ. ಸಾಮೂಹಿಕ ಶಿಕ್ಷೆ ಪರಿಹಾರವಲ್ಲ.
ಗಾಜಾದ ಅರ್ಧದಷ್ಟು ಜನಸಂಖ್ಯೆಯ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಅವರು ಇಡೀ ಜೀವನದುದ್ದಕ್ಕೂ ಬಾಂಬ್ ಸ್ಫೋಟಗಳ ಮಧ್ಯೆ ಬದುಕಬಾರದು ಎಂದು ಹೇಳಿದ್ದಾರೆ. ಕದನ ವಿರಾಮಕ್ಕೆ ಕರೆ ನೀಡವಂತೆ ಮನವಿ ಮಾಡಿರುವ ಮಲಾಲಾ ಅವರು, ಯುದ್ಧ ಬಂದಾಗಲೆಲ್ಲ ಮಕ್ಕಳು ಹೆಚ್ಚು ತೊಂದರೆ ಅನುಭವಿಸುತ್ತಾರೆ.
ಯುದ್ಧ ವಲಯದಲ್ಲಿ ಶಾಂತಿ ಮತ್ತು ನ್ಯಾಯಕ್ಕಾಗಿ ಆಶಿಸುತ್ತಿರುವ ಜನರಿಗಾಗಿ ತಾನು ದು:ಖಿತನಾಗಿದ್ದೇನೆ. ಯುದ್ಧದಲ್ಲಿ ಸಿಕ್ಕಿಬಿದ್ದಿರುವ ಪ್ಯಾಲೆಸ್ಟೈನ್ ಮತ್ತು ಇಸ್ರೇಲಿ ಮಕ್ಕಳ ಬಗ್ಗೆ ಚಿಂತಿಸುತ್ತಿದ್ದೇನೆ. ಯುದ್ಧವೂ ಮಕ್ಕಳನ್ನು ಎಂದಿಗೂ ಉಳಿಸುವುದಿಲ್ಲ ಎಂದು ಮಲಾಲಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.