ಕರ್ನಾಟಕ ರಾಜೋತ್ಸವ ನಿಯಮಿತ ಇಂದು ಕರ್ನಾಟಕದಲ್ಲಿ ಹಬ್ಬದ ಕಳೆ ಒಂದೆಡೆಯಾದರೆ ಇನ್ನೊಂದು ಎಡೆ ಮಹಾರಾಷ್ಟ್ರದ ಕಿಡಿಗೇಡಿಗಳಿಗೆ ಕರ್ನಟಕ ಪೋಲಿಸ್ ಸರ್ಪಗಾವಲು ನಿಯೋಜಿಸಿ ಹದ್ದಿನ ಕಣ್ಣಿಟ್ಟು ಜಿಲ್ಲಾ ಆಡಳಿತ ಮುಂಜಾಗ್ರತಾ ಕ್ರಮ ವಹಿಸಿದೆ.
ಅದೇ ರೀತಿ ಪದೇ ಪದೇ ಕರ್ನಾಟಕ ಖ್ಯಾತ ತೆಗೆಯುತ್ತಿರುವ ಮಹಾರಾಷ್ಟ್ರದ ಕಿಡಿಗೇಡಿಗಳಿಗೆ ಸಾಕಷ್ಟು ಬಾರಿ ಶಾಕ ಕೊಟ್ಟಿದ್ದು ಈ ಬಾರಿ ಮುಂಜಾಗ್ರತಾ ಕ್ರಮ ವಹಿಸಿದ ಜಿಲ್ಲಾಡಳಿತ ಮಹಾರಾಷ್ಟ್ರ ಸಚ್ಚಿವರುಗಳಿಗೆ ಪತ್ರಗಳನ್ನು ಸಹ ಬರೆದಿದ್ದಾರೆ.
ಇಂದು ಬೆಳಗಾವಿ ಜಿಲ್ಲಾ ಆದ್ಯಾಂತ ಕನ್ನಡಿಗರ ಸಂಭ್ರಮ ಮನೆ ಮಾಡಿದ್ದು ಎಲ್ಲೆಂದರಲ್ಲಿ ಕನ್ನಡ ಬಾವುಟಗಳು ತಲೆ ಎತ್ತಿ ನಿಂತಿವೆ.
ನಿಪ್ಪಾಣಿ ಪಟ್ಟಣದಲ್ಲಿ ಸಹ ಹೇಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಗಡಿನಾಡಿನಲ್ಲಿ ಸಹ ನಿಗಾವಹಿಸಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಇಗಾಲೆ ಕೆಲವು ಮಹಾರಾಷ್ಟ್ರದ ತಾಲ್ಲೂಕು ಹಾಗೂ ಹಳ್ಳಿಗಳು ಕರ್ನಾಟಕಕ್ಕೆ ಸೇರ್ಪಡೆ ಆಗುವ ಸಾಕಷ್ಟು ಸಂದೇಶಗಳನ್ನು ಸಹ ನೀಡಿರುತ್ತಾರೆ ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೆಲವು ಕಿಡಿಗೇಡಿಗಳು ಕರ್ನಾಟಕದಲ್ಲಿ ಖ್ಯಾತೆ ತೆಗೆಯಲು ಸಂಚು ಮಾಡುತ್ತಾರೆ ಅದಕ್ಕೆ ನಮ್ಮ ಕನ್ನಡಿಗರು ಅಲೇ ಉತ್ತರ ನೀಡಿ ಸೈ ಎನಿಸಿಕೊಳ್ಳುತ್ತಾರೆ.
ಒಟ್ಟಾರೆ ಈ ಬಾರಿ ಕರ್ನಾಟಕ ರಾಜ ಉತ್ಸವ ಅತಿ ವಿಜ್ರಂಭನೆಯಿಂದ ನಡೆಯುತ್ತಿದ್ದು ಕನ್ನಡಿಗರಿಗೆ ಸಂಭ್ರಮ ಉತ್ಸವ ಮೂಡಿದೆ.