ಬೆಂಗಳೂರು: ಅಂಬಾರಿ ಕದಿಯುವ ಕಥಾ ಹಂದರ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ನಟಿಸಿರುವ ನವಗ್ರಹ ಚಿತ್ರದ ಎರಡನೇ ಭಾಗದ ಪೋಸ್ಟರ್ ಬಿಡುಗಡೆಯಾಗಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ನವಗ್ರಹ-೨ ಪೋಸ್ಟರ್ ವೈರಲ್ ಆಗಿದೆ.
ಅಂಬಾರಿ ಊರಿನಲ್ಲಿ ಹದ್ದಿನ ಕಣ್ಣುಗಳು ಎಚ್ಚರಗೊಂಡಿವೆ ಎನ್ನುವ ಟ್ಯಾಗ್ ಲೈನ್ನೊಂದಿಗೆ ಪೋಸ್ಟರನ್ನುಬಿಡುಗಡೆ ಮಾಡಿರುವುದಾಗಿ ಚಿತ್ರ ನಿರ್ದೇಶಕ ದಿನಕರ್ ತೂಗದೀಪ್ ತಿಳಿಸಿದ್ದಾರೆ.
ನವಗ್ರಹ ಮೊದಲ ಭಾಗದಲ್ಲಿ ಖಳನಟರ ಮಕ್ಕಳ ಅಭಿನಯವನ್ನು ನೋಡಲಾಗಿತ್ತು. ಇದೇ ರೀತಿ ನವಗ್ರಹ-೨ರಲ್ಲಿ ಎಂಟು ನಾಯಕರು ಇರುವ ಸುಳಿವನ್ನು ಪೋಸ್ಟರ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಮೂಲಕ ನವಗ್ರಹ-೨ ತಯಾರಾಗುವುದು ಸತ್ಯ. ಈ ಬಗ್ಗೆ ಸುಳಿವು ನೀಡಿರುವ ನಿರ್ದೇಶಕ ದಿನಕರ್ ತೂಗದೀಪ್ ಹಬ್ಬದ ಹೊತ್ತಿನಲ್ಲಿ ಪೋಸ್ಟ್ ಹಂಚಿಕೊಂಡು ಮತ್ತಷ್ಟು ಕುತೂಹಲವನ್ನು ಅಭಿಮಾನಿಗಳಲ್ಲಿ ಹೆಚ್ಚಿಸಿದೆ. ಸಿನಿಮಾ ಯಾವಾಗ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ನಡೆಯುತ್ತಿದೆ