‘ಕ್ಯಾಪ್ಟನ್ ಮಿಲ್ಲರ್’ ಫಸ್ಟ್ ಲುಕ್ ಗಮನ ಸೆಳೆಯುವಂತಿದೆ. ಸುತ್ತಲೂ ಹೆಣಗಳ ರಾಶಿ ಇದೆ. ಅದರ ಮಧ್ಯೆ ಧನುಶ್ ನಿಂತಿದ್ದಾರೆ. ಅವರ ಕೈಯಲ್ಲಿ ಗನ್ ಇದೆ.
ಕಾಲಿವುಡ್ ನಟ ಧನುಶ್ (Dhanush) ಅವರು ಒಂದೇ ರೀತಿಯ ಪಾತ್ರಕ್ಕೆ ಸೀಮಿತರಾದವರಲ್ಲ. ಅವರು ಚಿತ್ರದಿಂದ ಚಿತ್ರಕ್ಕೆ ಭಿನ್ನ ಕಥೆ ಇರುವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ಅವರ ಪಾತ್ರಗಳು ಕೂಡ ಗಮನ ಸೆಳೆಯುವ ರೀತಿಯಲ್ಲಿ ಇರುತ್ತದೆ. ಈಗ ಅವರು ‘ಕ್ಯಾಪ್ಟನ್ ಮಿಲ್ಲರ್’ (Captain Miller)ಚಿತ್ರದ ಮೂಲಕ ಗಮನ ಸೆಳೆಯಲು ರೆಡಿ ಆಗಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಸಿನಿಮಾ ಹೊಂದಿರಲಿದೆ. ಈ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದ್ದು, ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಇದನ್ನು ನೋಡಿ ಧನುಶ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
‘ಕ್ಯಾಪ್ಟನ್ ಮಿಲ್ಲರ್’ ಫಸ್ಟ್ ಲುಕ್ ಗಮನ ಸೆಳೆಯುವಂತಿದೆ. ಸುತ್ತಲೂ ಹೆಣಗಳ ರಾಶಿ ಇದೆ. ಅದರ ಮಧ್ಯೆ ಧನುಶ್ ನಿಂತಿದ್ದಾರೆ. ಅವರ ಕೈಯಲ್ಲಿ ಗನ್ ಇದೆ. ಆ ಗನ್ ನೋಡಿದರೆ ಇದು ರೆಟ್ರೋ ಕಾಲದ ಕಥೆ ಎಂಬುದು ಸ್ಪಷ್ಟವಾಗುತ್ತದೆ. ಹಿಂಭಾಗದಲ್ಲಿ ಒಂದಷ್ಟು ವಾಹನಗಳು ಇವೆ. ‘ಗೌರವವೇ ಸ್ವಾತಂತ್ರ್ಯ’ ಎಂದು ಈ ಪೋಸ್ಟರ್ಗೆ ಧನುಶ್ ಕ್ಯಾಪ್ಶನ್ ನೀಡಿದ್ದಾರೆ. ಈ ಲುಕ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಶಿವಣ್ಣ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
ಧನುಶ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಶ್ ಜೊತೆ ಶಿವರಾಜ್ಕುಮಾರ್ ಕೂಡ ನಟಿಸುತ್ತಿದ್ದಾರೆ. ಇಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಶಿವಣ್ಣ ಈಗ ಪರಭಾಷೆಗಳ ಚಿತ್ರಗಳನ್ನೂ ಒಪ್ಪಿಕೊಳ್ಳುತ್ತಿದ್ದಾರೆ. ಅವರು ಧನುಶ್ ಚಿತ್ರದಲ್ಲಿ ನಟಿಸುತ್ತಾರೆ ಎಂದಾಗಲೇ ಕುತೂಹಲ ಹೆಚ್ಚಿತ್ತು. ಅವರ ಪಾತ್ರ ಹೇಗೆ ಇರಲಿದೆ ಎಂಬ ತಿಳಿದುಕೊಳ್ಳುವ ಕಾತುರ ಅಭಿಮಾನಿಗಳಲ್ಲಿ ಮೂಡಿದೆ.
ಈ ವರ್ಷದ ಆರಂಭದಲ್ಲಿ ಧನುಶ್ ನಟನೆಯ ‘ವಾತಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಈ ಬೆನ್ನಲ್ಲೇ ಅವರು ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಸೆಂಚುರಿ ಸ್ಟಾರ್’ ನಟಿಸಿರುವುದರಿಂದ ಈ ಸಿನಿಮಾ ಬಗ್ಗೆ ಕನ್ನಡಿಗರಿಗೂ ನಿರೀಕ್ಷೆ ಇದೆ. ಇಬ್ಬರ ಕಾಂಬಿನೇಷನ್ ಹೇಗೆ ಮೂಡಿಬರಲಿದೆ ಎಂಬ ಕೌತುಕ ಅಭಿಮಾನಿಗಳದ್ದು. ಈ ಚಿತ್ರವನ್ನು ಅರುಣ್ ಮಾದೇಶ್ವರನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.