ಬೆಂಗಳೂರು: ಘೋಸ್ಟ್ ಚಿತ್ರದ ಬಗ್ಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಇದೆ ಎಂದು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ತಿಳಿಸಿದ್ದಾರೆ. ನಮ್ಮ ಜನ ಎಷ್ಟು ಅಪ್ಡೇಟ್ ಆಗಿದ್ದಾರೆ ಎಂದರೆ ವಿಷನ್ ತಕ್ಕಂತೆ ಮ್ಯೂಸಿಕ್ ಇದೆ.
ನಮ್ಮ ಜನ ತುಂಬಾ ತಾಳ್ಮೆಯಿಂದ ನೋಡ್ತಿರೋದು ಖುಷಿ ಕೊಟ್ಟಿದೆ. ಚೆನ್ನೈ, ಮುಂಬೈಸೇರಿದಂತೆ ಬೇರೆ ರಾಜ್ಯಗಳಲ್ಲೂ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ದಳವಾಯಿ ಪಾತ್ರವನ್ನು ಪ್ರೇಕ್ಷಕರು ಇಷ್ಟ ಪಡುತ್ತಿದ್ದಾರೆ ಎಂದು ಅವರು ಹೇಳಿದರು.
ಮಲ್ಪಿಪ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಧ್ವನಿ ಎತ್ತೋ ಪ್ರಶ್ನೆ ಇಲ್ಲ. ಅವರಿಗೆ ಅರ್ಥ ಆಗಬೇಕು. ನಾವೂ ಯಾವ ಸಿನಿಮಾನೂ ಬೇಡ ಅನ್ನಲ್ಲ. ಕಲೆಕ್ಷನ್ ಚನ್ನಾಗಿದ್ರೆ ಮೂರು ವಾರ ಸಿನಿಮಾ ಒಡ್ಲಿ. ಪಿವಿಆರ್ ಅವರಿಗೆ ಕೊಂಬು ಇದೇ ಅಂತ ಅಲ್ಲ. ನಾವು ಬೆಳೆದಿದ್ದೆ ಸಿಂಗಲ್ ಥಿಯೇಟರ್ನಿಂದ. ನಾವು ಬರೋದು ಸಿಂಗಲ್ ಆಗಿ, ಹೊಗೋದು ಸಿಂಗಲ್ ಆಗಿ. ನಾವು ಸಿನಿಮಾವನ್ನು ಎಂಜಾಯ್ ಮಾಡಬೇಕು ಎಂದು ಶಿವರಾಜ್ಕುಮಾರ್ ತಿಳಿಸಿದರು.