ಗದಗ್: ಮೊನ್ನೆಯಷ್ಟೇ ಸಚಿವ ಹೆಚ್.ಕೆ. ಪಾಟೀಲ್ ಅವರು ಥರ್ಡ್ ಐ ಚಾಲನೆ ನೀಡಿದ್ದ ಹಿನ್ನೆಲೆಯಲ್ಲಿ ಗದಗ ಸಂಚಾರಿ ಪೊಲೀಸರು ಪ್ರಾಯೋಗಿಕವಾಗಿ ಸೋಮವಾರದಿಂದ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
೨೩ ಪ್ರಕರಣಗಳ ಪೈಕಿ ಸದ್ಯ ೧೬ ಪ್ರಕರಣ ದಾಖಲಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಮಂಗಳವಾರ ಥರ್ಡ್ ಐನ ಕಚೇರಿ ಉದ್ಘಾಟನೆ ಮಾಡಿದ ಎಸ್ಪಿ ನೇಮೇಗೌಡ.ಬಿ.ಎಸ್. ಮಾತನಾಡಿ, ವಾಹನ ಸವಾರರಿಗೆ ಅವರ ತಪ್ಪಿನ ಅರಿವು ಮೂಡಿಸಿ ದಂಡ ಪಾವತಿಸಿಕೊಂಡು ಮತ್ತೊಮ್ಮೆ ಈ ರೀತಿ ಸಂಚಾರಿ ನಿಯಮ ಉಲ್ಲಂಘಿಸಿ ಚಾಲನೆ ಮಾಡದಿರಿ ಎಂದು ತಿಳಿ ಹೇಳಿದರು.