ಇಂಧನ ಇಲಾಖೆಯಲ್ಲಿ ನಡೆದಿರುವ ಲೂಟಿ ಆರೋಪದ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದಾಖಲೆ ಬಿಡುಗಡೆ ವಿಚಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿದರು.
ಬೆಂಗಳೂರಿನ ವಿಧಾನಸೌಧದ ಬಳಿ ಮಾತನಾಡಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದವರು, ಅವರು ಎಲ್ಲಾ ದಾಖಲೆ ಬಿಡುಗಡೆ ಮಾಡಲಿ
ಆನಂತರ ನಾನು ಮಾತನಾಡ್ತೇನೆ. ಕಾನೂನು ಬಾಹಿರವಾಗಿ ಯಾರೇ ಮಾಡಿದ್ರು ಮಾಡಲಿ, ಅವರು ದಾಖಲೆ ಬಿಡುವಾಗ ಗೊತ್ತಾಗುತ್ತದೆ.
ಅವತ್ತು ಪೆನ್ ಡ್ರೈವ್ ತೋರಿಸಿದ್ರಲ್ಲ ಏನಾದ್ರೂ ಅವರು ಬಿಡುಗಡೆ ಮಾಡಿದ್ರಾ?. ನನ್ನ ಡಿಪಾರ್ಟ್ಮೆಂಟ್ ಬಗ್ಗೆ ಕೇಳಿ, ನಾನು ಅದರ ಬಗ್ಗೆ ಮಾತನಾಡ್ತೇನೆ. ವಿದ್ಯುತ್ ಖರೀದಿಗೆ ಫಂಡ್ ಇದೆ, ಯಾರು ಫಂಡ್ ಇಲ್ಲ ಅಂತ ಹೇಳಿದ್ದು ಎಂದು ಕಿಡಿಕಾರಿದರು.