ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಆರ್ಬಿಐ, ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ಗಳ ವಿರುದ್ಧ ದೂರು ದಾಖಲಿಸಿದೆ.
ಬೆಂಗಳೂರು: ನಕಲಿ ನೋಟುಗಳ(Fake Notes) ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಟ್ಟು 100 ರೂಪಾಯಿ ಮುಖಬೆಲೆಯ 30 ನಕಲಿ ನೋಟುಗಳು ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ 4 ಎಫ್ಐಆರ್ಗಳು ದಾಖಲಾಗಿವೆ. ಉಡುಪಿ , ಮಣಿಪಾಲ , ಹುಬ್ಬಳ್ಳಿ ಹಾಗು ಮಲ್ಲೇಶ್ವರ ಬ್ರಾಂಚ್ನ ಬ್ಯಾಂಕ್ ಗಳಲ್ಲಿ ನಕಲಿ ನೋಟು ಪತ್ತೆಯಾಗಿವೆ. ಆರ್ಬಿಐಗೆ ರಿಮೀಟ್ ಮಾಡುವ ಸಂದರ್ಭದಲ್ಲಿ ಈ ನಕಲಿ ನೋಟುಗಳು ಬೆಳಕಿಗೆ ಬಂದಿವೆ.
ಆರ್ ಬಿ ಐ (RBI) ಮ್ಯಾನೇಜರ್ ಆನಂದ್ ಅವರು ಬ್ಯಾಂಕ್ ಆಫ್ ಬರೋಡಾ , ಕೆನರಾ, ಯುಬಿಐ ಬ್ಯಾಂಕ್ ಮ್ಯಾನೇಜರ್ ಮೇಲೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬ್ಯಾಂಕ್ ಮ್ಯಾನೇಜರ್ ಗಳನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ನಕಲಿ ನೋಟಿನ ಜಾಲದ ಹಿಂದೆ ಬಿದ್ದಿದ್ದಾರೆ.
ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ರೂ. ಹಣ ಪತ್ತೆ
ಚಿತ್ರದುರ್ಗ: ಹೊಳಲ್ಕೆರೆಯಲ್ಲಿ ಮೃತಪಟ್ಟ ಸನ್ಯಾಸಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆಯಾಗಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಗಂಗಾಧರ ಶಾಸ್ತ್ರಿ(70) ಮನೆಯ ವಿವಿದೆಡೆ ಇರಿಸಿದ್ದ 30ಲಕ್ಷ ರೂ. ಅಧಿಕ ಹಣ ಸಿಕ್ಕಿದೆ. ಒಂಟಿಯಾಗಿದ್ದ ಗಂಗಾಧರ ಶಾಸ್ತ್ರಿ ವಾರದ ಹಿಂದೆ ಮೃತಪಟ್ಟಿದ್ದರು. ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುತ್ತಿದ್ದರು. 16ಎಕರೆ ಜಮೀನಿದ್ದು 4ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ 46 ಸಾವಿರ ರೂ. ಹಾಗೂ ಕೃಷಿ ಮತ್ತಿತರೆ ಆದಾಯದಿಂದ ಬಂದ 30ಲಕ್ಷ ರೂ. ಅಧಿಕ ಹಣ ಪತ್ತೆಯಾಗಿದೆ. 2 ದಿನ ಹಿಂದೆ ಭಕ್ತರು ಶಾಸ್ತ್ರಿ ಮನೆ ಪರಿಶೀಲಿಸಿದಾಗ ಹಣ ಸಿಕ್ಕದೆ.
ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರ ಮುಂದಾಗಿದ್ದು, ಈ ಬಗ್ಗೆ ಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆ ಮಾಡಲು ನಿರ್ಧರಿಸಿದ್ದಾರೆ.