ಸ್ಯಾಂಡಲ್ವುಡ್ ಗೆ ಹುಲಿ ಉಗುರು ಪ್ರಕರಣ ಬೆಂಬಿಡದೆ ಕಾಡುತ್ತಿದೆ. ನಟಿ ಅಮೂಲ್ಯರವರ ಅವಳಿ ಮಕ್ಕಳ ಕೊರಳಲ್ಲಿ ಹುಲಿ ಉಗುರು ಪೆಂಡೆಂಟ್ ಮಕ್ಕಳ ನಾಮಕರಣದ ವೇಳೆ ಹಾಕಲಾಗಿದ್ದ ಪೆಂಡೆಂಟ್ ಎಂದು ಮಾಹಿತಿ ಹೊರ ಬಿದ್ದಿದೆ.
ಸಿಂಥೆಟಿಕ್ ಪೆಂಡೆಂಟ್ ಎಂದು ಅಮೂಲ್ಯ ಸ್ಪಷ್ಟನೆ ನೀಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳ ತನಿಖೆ ಎದುರಿಸಬೇಕಾಗುತ್ತಾ ಅಮೂಲ್ಯ ಎಂಬುದನ್ನು ಕಾದು ನೋಡಬೇಕಿದೆ.