ಪ್ರಧಾನಿ ಹುದ್ದೆ ಬಗ್ಗೆ ಅಮಿತ್ ಶಾ ಅಚ್ಚರಿ ಹೇಳಿಕೆ: ತಮಿಳು ನಾಯಕನಿಗೆ ಪಿಎಂ ಕುರ್ಚಿ
ಚೆನ್ನೈ: ಮುಂದಿನ ದಿನಗಳಲ್ಲಿ ತಮಿಳುನಾಡಿನ ನಾಯಕರೊಬ್ಬರನ್ನು ದೇಶದ ಪ್ರಧಾನಿಯಾಗಿ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತಮಿಳುನಾಡು ಪ್ರವಾಸ ಕೈಗೊಂಡಿರುವ ಅಮಿತ್ ಷಾ ಭಾನುವಾರ ರಾಜ್ಯ ಬಿಜೆಪಿ ಹಿರಿಯ ನಾಯಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ತಮಿಳು ನಾಯಕರೊಬ್ಬರು ದೇಶದ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಹಿಂದೆ ತಮಿಳುನಾಡಿಗೆ ಪ್ರಧಾನಿ ಹುದ್ದೆ ಎರಡು ಬಾರಿ ಒಲಿದು ಬಂದಿತ್ತು. ಆದರೆ, ಡಿಎಂಕೆಯಿಂದ ಅವಕಾಶ ತಪ್ಪಿತ್ತು. ಮುಂದೆ ತಮಿಳು ನಾಯಕರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ 20 ಸೀಟು ಗೆಲ್ಲಬೇಕು ತಿಳಿಸಿದ್ದಾರೆ.