ಬೆಂಗಳೂರು: ವುಡ್ ಲ್ಯಾಂಡ್ ಹೋಟೆಲು ಸಭಾಂಗಣದಲ್ಲಿ ಮೇ ತಿಂಗಳಲ್ಲಿ ವಯೋ ನಿವೃತ್ತಿಯಾದ ಅಧಿಕಾರಿ ಮತ್ತು ನೌಕರರಿಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಸನ್ಮಾನ ಸಮಾರಂಭ.
ಉಪ ಆಯುಕ್ತರಾದ ಮಂಜುನಾಥ್ ರವರು, ಸಹಾಯಕ ಆಯುಕ್ತರಾದ ಶ್ರೀನಿವಾಸ್,ಜಂಟಿಆಯುಕ್ತರಾದ ವೆಂಕಟಚಲಪತಿ, ಉಪ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಅಭಿಯಂತರಾದ ವಿಶ್ವನಾಥ್, ಪ್ರಾಂಶುಪಾಲರಾದ ರವೀಂದ್ರ,ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ದೀಪ ಬೆಳಗಿಸಿ ಬೀಳ್ಕೊಡುಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಬಿಎಂಪಿ ಮೇ ತಿಂಗಳಲ್ಲಿ ನಿವೃತ್ತಿಯಾದ 52ಅಧಿಕಾರಿ, ನೌಕರರಿಗೆ ಸನ್ಮಾನಿಸಲಾಯಿತು.
ಜನ ಸೇವೆಯೆ ಜನಾರ್ಧನ ಸೇವೆ ಅಂದರೆ ದೇವರ ಸೇವೆ ಮಾಡಿದಂತೆ , ತಮ್ಮ ಜೀವನ ಬಹುಪಾಲು ಸಮಯವನ್ನು ನಗರ ಅಭಿವೃದ್ದಿ ಮತ್ತು ಜನರ ಸಮಸ್ಯೆ ನಿವಾರಣೆಗಾಗಿ ಹಗಲಿರುಳು ಶ್ರಮಿಸಿದ ಅಧಿಕಾರಿ ಮತ್ತು ನೌಕರರಿಗೆ ಗೌರವ ಸನ್ಮಾನ ನೀಡಿ, ಗೌರವಪೂರ್ವಕವಾಗಿ ಬೀಳ್ಕೊಡುಗೆ ಮಾಡಿದಾಗ ಅವರ ಸೇವೆಯನ್ನ ಸ್ಮರಣ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ.
ಪ್ರತಿಯೊಬ್ಬ ಜೀವನದಲ್ಲಿ ವಯಸ್ಸು ಆಗುತ್ತದೆ, ವಯೋಸಹಜ ನಿವೃತ್ತಿ ಸಹಜ.
ವಯಸ್ಸು ಆಯಿತು, ನಿಮ್ಮ ಅವಶ್ಯಕತೆ ಇಲ್ಲ ಎಂಬ ಭಾವನೆ ಬಿಡಿ, ವಿಶ್ರಾಂತ ಜೀವನ ಸಾಗಿಸಲು ಅಧಿಕಾರಿ ಮತ್ತು ನೌಕರರ ಸಂಘ ನಿವೃತ್ತಿ ಅಧಿಕಾರ ಮತ್ತು ನೌಕರರ ಜೀವನಕ್ಕೆ ಹೆಗಲು ಕೊಟ್ಟಿ ನಡೆಯುತ್ತಿದೆ.
ನಿವೃತ್ತಿ ಹೊಂದಿದ ಅಧಿಕಾರಿ ಮತ್ತು ನೌಕರರಿಗೆ ಸಂಘದ ಚಟುವಟಿಕೆ ಭಾಗವಹಿಸಲು ಅವಕಾಶ ಮತ್ತು ಪಿಂಚಣಿ, ಹೆಲ್ತ್ ಕಾರ್ಡ್ ಮತ್ತು ನಿವೃತ್ತಿ ನೌಕರರಿಗೆ ಸಕಾಲಕ್ಕೆ ಸಿಗುವಂತೆ ಸಂಘವು ಶ್ರಮಿಸುತ್ತದೆ.
ಇದುವರಗೆ ಸಂಘ 63ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ 1500ಕ್ಕೂ ಅಧಿಕಾರಿ, ನೌಕರರಿಗೆ ಗೌರವ ಸಮರ್ಪಣೆ ಮಾಡಲಾಗಿದೆ.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್, ಬಾಬಣ್ಣ,ಕೆ.ಜಿ.ರವಿ,ಡಿ.ರಾಮಚಂದ್ರ, ರುದ್ರೇಶ್,ನಂಜಪ್ಪ, ಮಂಜೇಗೌಡ, ಸಂತೋಷ್ ಕುಮಾರ್ ನಾಯಕ್, ನರಸಿಂಹ, ಸಂದ್ಯಾ, ರೇಣುಕಾಂಬ, ಸೂರ್ಯಕುಮಾರಿ, ಉಮಾದೇವಿರವರು ಭಾಗವಹಿಸಿದ್ದರು.