ಡಿಕೆ ಶಿವಕುಮಾರ್ ಅವರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿ ಬಗ್ಗೆ ಬಿಜೆಪಿ ಶಾಸಜ ಬಸನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದು, ಅವರನ್ನು ಮನೆಯವರೆಗೂ ಬಿಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.
ಬೆಳಗಾವಿ: ಸಿದ್ದರಾಮಯ್ಯ, ಡಿಕೆ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ 5 ವರ್ಷ ಪೂರೈಸಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಅಥವಾ ನಂತರ ಆಕ್ಸಿಡೆಂಟ್ ಆಗುತ್ತೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೆಟ್ಟು ಮೆಟ್ಟಿನಿಂದ ಹೊಡೆದಾಡಿಕೊಳ್ಳುತ್ತಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಭವಿಷ್ಯ ನುಡಿದರು. ಬೆಳಗಾವಿಯಲ್ಲಿ ಇಂದು(ಜೂನ್ 25) ಮಾತನಾಡಿರುವ ಯತ್ನಾಳ್, ಯಡಿಯೂರಪ್ಪ, ಬೊಮ್ಮಾಯಿ ಮನೆಗೆ ಸೌಜನ್ಯದ ಭೇಟಿ ಅಂತಾರೆ. ಇವರು ಸೌಜನ್ಯದ ಭೇಟಿ ಕೊಡುತ್ತಿಲ್ಲ. ಸೋನಿಯಾ ಗಾಂಧಿ ಹೆದರಿಸುವ ಕೆಲಸ. ಬಸವರಾಜ ಬೊಮ್ಮಾಯಿಯವರೇ (Basavaraj Bommai) ಮನೆವರೆಗೂ ಅವರನ್ನ ಬಿಟ್ಟುಕೊಳ್ಳಬೇಡಿ ಎಂದು ಸಲಹೆ ನೀಡಿದರು.
ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಿ, ಇಲ್ಲದಿದ್ದರೆ ಪಕ್ಷದಿಂದ ಹೊರ ನಡೆಯಿರಿ. ನಾವ್ಯಾರು ಜಗಳ ಮಾಡಿತ್ತಿಲ್ಲ, ಪಕ್ಷ ನಿರ್ಣಯ ಮಾಡಿದವರ ಪರ ಕೆಲಸ ಮಾಡಿ. ಮುಂದಿನ 3 ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಬಣ್ಣ ಬಯಲಾಗಲಿದೆ. ಸಿದ್ದರಾಮಯ್ಯನವರು ಏನ್ ಹೇಳಿದ್ರು ಎನ್ನುವುದನ್ನು ಹೊರತೆಗೆಯುತ್ತೇವೆ. ನಾವು ದನ ಕಾಯುತ್ತಿಲ್ಲ, ಆರ್ಥಿಕ ಸ್ಥಿತಿಗತಿ ಬಗ್ಗೆ ಗೊತ್ತಿದೆ. ಇದು ಐದು ವರ್ಷ ನಡೆಯುವ ಸರ್ಕಾರ ಅಲ್ಲ. ಲೋಕಸಭಾ ಚುನಾವಣೆ ಮುನ್ನ, ಇಲ್ಲ ಆದ ಬಳಿಕ ಆಕ್ಸಿಡೆಂಟ್ ಆಗುತ್ತೆ. ಅಷ್ಟರಲ್ಲಿ ಇಬ್ಬರು (ಸಿದ್ದರಾಮಯ್ಯ- ಡಿಕೆ ಶಿವಕುಮಾರ್) ಮೆಟ್ಟು ಮೆಟ್ಟಿನಿಂದ ಹೊಡೆದಾಡಿಕೊಳ್ಳುತ್ತಾರೆ ಎಂದರು.
ನಾವು ವಿರೋಧ ಪಕ್ಷದವರ ಮನೆಗೆ ಹೋಗುವುದಿಲ್ಲ ಅಂತಾರೆ. ಅದೇ ರೀತಿ ನಾವು ಅವರ ಮನೆಗೆ ಹೋಗುವುದಿಲ್ಲ ಎಂದು ಹೇಳಿ. ಅವರನ್ನ ಸ್ವಾಗತಿಸಿಕೊಂಡ್ರೇ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ. ಹಲ್ಕಟಗಿರಿ ಮಾಡುವುದಿದ್ರೆ ಬಿಟ್ಟು ಹೋಗಿ. ನಾವು ಯಾರು ಜಗಳ ಮಾಡುತ್ತಿಲ್ಲ, ಪಾರ್ಟಿ ನಿರ್ಣಯ ಮಾಡಿದವರ ಪರ ಕೆಲಸ ಮಾಡಿ. ಮೂರು ತಿಂಗಳಲ್ಲಿ ಗ್ಯಾರಂಟಿ ಬಣ್ಣ ಬಯಲು ಆಗಲಿದೆ. ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಯಾಗಲಿದೆ. ಪಕ್ಷ ನಿರ್ಣಯ ಮಾಡಿದವರು ವಿರೋಧ ಪಕ್ಷದ ನಾಯಕರು ಆಗಲಿದ್ದಾರೆ. ನಮ್ಮಲ್ಲಿ ಯಾವುದೇ ಒಳ ಪೈಪೋಟಿ ಇಲ್ಲ ಎಂದು ಸ್ಪಷ್ಟಪಡಿಸಿದರು.