‘ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್’ ಅನ್ನು ಗ್ರಾಹಕರಿಗೆ ವಿತರಿಸಲು ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿನ ಎಟಿಎಂಗಳು, ಪಿಒಎಸ್ ಯಂತ್ರಗಳು ಮತ್ತು ಸಾಗರೋತ್ತರ ಆನ್ಲೈನ್ ವ್ಯಾಪಾರಿಗಳಲ್ಲಿ ಬಳಸಲು ಅನುಕೂಲವಾಗುವ ಈ ಪ್ರಿಪೇಯ್ಡ್ ಫೊರೆಕ್ಸ್ ಕಾರ್ಡ್ಗಳನ್ನು ಬಿಡುಗಡೆ ಮಾಡುವಂತೆ ಆರ್ಬಿಐ ಸೂಚಿಸಿದೆ. ಇದರಿಂದ ಪ್ರಪಂಚದಾದ್ಯಂತ ರುಪೇ ಕಾರ್ಡ್ಗಳ ಪ್ರವೇಶ ಮತ್ತು ಸ್ವೀಕಾರವು ಹೆಚ್ಚಾಗಲಿದೆ.
ಹೈಲೈಟ್ಸ್:
- ‘ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್’ ಅನ್ನು ಗ್ರಾಹಕರಿಗೆ ವಿತರಿಸಲು ಬ್ಯಾಂಕ್ಗಳಿಗೆ ಅನುಮತಿ ನೀಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
- ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿನ ಎಟಿಎಂ, ಪಿಒಎಸ್ ಯಂತ್ರಗಳು ಮತ್ತು ಸಾಗರೋತ್ತರ ಆನ್ಲೈನ್ ವ್ಯಾಪಾರಿಗಳಲ್ಲಿ ಬಳಸಲು ಅನುಕೂಲ ಈ ಕಾರ್ಡ್
- ಇದರಿಂದ ಪ್ರಪಂಚದಾದ್ಯಂತ ಹೆಚ್ಚಾಗಲಿದೆ ರುಪೇ ಕಾರ್ಡ್ಗಳ ಪ್ರವೇಶ ಮತ್ತು ಸ್ವೀಕಾರ
ಮುಂಬಯಿ: ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿನ ಎಟಿಎಂಗಳು, ಪಿಒಎಸ್ ಯಂತ್ರಗಳು ಮತ್ತು ಸಾಗರೋತ್ತರ ಆನ್ಲೈನ್ ವ್ಯಾಪಾರಿಗಳಲ್ಲಿ ಬಳಸಲು ಅನುಕೂಲವಾಗುವ ‘ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್’ ಅನ್ನು ಗ್ರಾಹಕರಿಗೆ ವಿತರಿಸಲು ಭಾರತದಲ್ಲಿನ ಬ್ಯಾಂಕ್ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಅನುಮತಿ ನೀಡಿದೆ.
ರುಪೇ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ಗಳ ಹೊರತಾಗಿ ಹೆಚ್ಚುವರಿಯಾಗಿ ವಿದೇಶಗಳಲ್ಲೂ ಬಳಸುವಂಥ ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್ ಅನ್ನು ಬಿಡುಗಡೆ ಮಾಡಲು ಬ್ಯಾಂಕ್ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.
ಈ ಕ್ರಮದಿಂದಾಗಿ ಪ್ರಪಂಚದಾದ್ಯಂತ ರುಪೇ ಕಾರ್ಡ್ಗಳ ಪ್ರವೇಶ ಮತ್ತು ಸ್ವೀಕಾರವು ಹೆಚ್ಚಾಗಲಿದೆ. “ಭಾರತದಲ್ಲಿ ಬ್ಯಾಂಕ್ಗಳು ನೀಡುವ ರುಪೇ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಅಂತಾರಾಷ್ಟ್ರೀಯ ಕಾರ್ಡ್ ಯೋಜನೆಗಳೊಂದಿಗೆ ಸಹ – ಬ್ಯಾಡ್ಜಿಂಗ್ ವ್ಯವಸ್ಥೆಗಳ ಮೂಲಕ ಅಂತಾರಾಷ್ಟ್ರೀಯ ಸ್ವೀಕಾರವನ್ನು ಪಡೆದಿವೆ. ವಿದೇಶಗಳಲ್ಲಿ ಪ್ರಯಾಣಿಸುವ ಭಾರತೀಯರಿಗೆ ಪಾವತಿ ಆಯ್ಕೆಗಳನ್ನು ವಿಸ್ತರಿಸುವ ಸಲುವಾಗಿ, ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್ಗಳು ನೆರವಾಗಲಿವೆ,” ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್ನ ಕನಿಷ್ಠ ಮಾನ್ಯತೆ ಎಷ್ಟು?
ಈ ರುಪೇ ಪ್ರೀಪೇಯ್ಡ್ ಫೊರೆಕ್ಸ್ ಕಾರ್ಡ್ಗಳು ಒಂದು ವರ್ಷದ ಕನಿಷ್ಠ ಮಾನ್ಯತೆಯ ಅವಧಿಯನ್ನು ಹೊಂದಿರುತ್ತವೆ. ಆದಾಗ್ಯೂ, ದೀರ್ಘಾವಧಿಯ ಮಾನ್ಯತೆಯೊಂದಿಗೆ ಈ ಕಾರ್ಡ್ಗಳನ್ನು ವಿತರಿಸಲು ಅವಕಾಶವಿದೆ.
ಬಡ್ಡಿದರದಲ್ಲಿ ಯಥಾಸ್ಥಿತಿ, ಸಾಲಗಾರರು ನಿರಾಳ
ರೆಪೋ ದರವನ್ನು ಮತ್ತೆ ಯಥಾಸ್ಥಿತಿಯಲ್ಲಿಡಲು ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿ ನಿರ್ಧರಿಸಿದೆ. ಇದರಿಂದ ರೆಪೋ ದರ ಶೇ.6.50ರಲ್ಲೇ ಮುಂದುವರಿಯಲಿದೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ನಿರಂತರವಾಗಿ ರೆಪೋ ದರವನ್ನು ಕಳೆದ ಒಂದು ವರ್ಷದಲ್ಲಿ ಆರ್ಬಿಐ ಏರಿಕೆ ಮಾಡುತ್ತಾ ಬಂದಿತ್ತು. ಇದರಿಂದ ಗೃಹ, ವಾಹನ ಸಾಲ ಸೇರಿದಂತೆ ಎಲ್ಲ ಸಾಲಗಳ ಬಡ್ಡಿ ದರವನ್ನು ಬ್ಯಾಂಕ್ಗಳು ಏರಿಕೆ ಮಾಡಿವೆ. ಗ್ರಾಹಕರ ಇಎಂಐಗಳೂ ಗಣನೀಯವಾಗಿ ಏರಿಕೆಯಾಗಿವೆ. ಈ ಮಧ್ಯೆ, ಕಳೆದ ಏಪ್ರಿಲ್ನ ಸಭೆ ಮತ್ತು ಈಗಿನ ಸಭೆಯಲ್ಲಿ ರೆಪೋ ದರ ಏರಿಕೆಗೆ ತಡೆ ಬಿದ್ದಿದ್ದು, ಸಾಲಗಾರರು ತುಸು ನಿರಾಳಗೊಂಡಿದ್ದಾರೆ.
ಚಿಲ್ಲರೆ ಹಣದುಬ್ಬರವು ಶೇ.4ರ ಗುರಿಗಿಂತ ಮೇಲಿದೆ ಹಾಗೂ ವರ್ಷದ ಉಳಿದ ಅವಧಿಯಲ್ಲೂ ಶೇ.4ಕ್ಕಿಂತ ಅಧಿಕ ಪ್ರಮಾಣದಲ್ಲಿಯೇ ಹಣದುಬ್ಬರ ಮುಂದುವರಿಯುವ ನಿರೀಕ್ಷೆಯಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಏಪ್ರಿಲ್ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ (ಸಿಪಿಐ) ಚಿಲ್ಲರೆ ಹಣದುಬ್ಬರವು 18 ತಿಂಗಳ ಕನಿಷ್ಠ ಮಟ್ಟ ಶೇ.4.7 ಇಳಿಕೆ ಕಂಡಿತ್ತು. ಮಾರ್ಚ್ನಲ್ಲಿ ಶೇ.5.7ರಷ್ಟಿತ್ತು. ಏಪ್ರಿಲ್ನಲ್ಲಿ ಹಣದುಬ್ಬರವು ಆರ್ಬಿಐ ನಿಗದಿ ಮಾಡಿರುವ ಶೇ.2-6ರ ನಡುವಿನ ಗುರಿಯ ನಡುವೆ ಬಂದಿದೆ. ದೇಶದ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಮೇ 2022ರಿಂದ ನಿರಂತರವಾಗಿ ರೆಪೋ ದರವನ್ನು ಒಟ್ಟು ಶೇ.2.50ರಷ್ಟು ಏರಿಸಲಾಗಿತ್ತು.