ತುಮಕೂರು: ವಿವಾಹಿತ ಮಹಿಳೆಯ ತಲೆ ಮೇಲೆ ಕಲ್ಲುಎತ್ತು ಹಾಕಿ ಕೊಲೆ ಮಾಡಿರುವ ಘಟನೆ ತುರವೇಕೆರೆ ತಾಲೂಕಿನ ದಂಡಿನಶಿವರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಗೀಡಾದ ಮಹಿಳೆಯನ್ನು ಕೋಡಿಹಳ್ಳಿ ಗ್ರಾಮದ ಗಿರೀಶ್ ಎಂಬುವವರ ಪತ್ನಿ ಕಾವ್ಯಾ(೨೩). ಕಾವ್ಯಾ ಜಮೀನಿನಿಂದ ಸಂಜೆ ದನಗಳನ್ನು ಮನೆಯ ಕಡೆಗೆ ಹೊಡೆದುಕೊಂಡು ಬರುವ ವೇಳೆಯಲ್ಲಿ ಈ ಕೃತ್ಯ ನಡೆದಿದೆ.
ಕೊಲೆಗೈದಿರುವ ಯುವಕ ಅದೇ ಗ್ರಾಮದ ನಿವಾಸಿಯಾಗಿದ್ದು ಪರಾರಿಯಾಗಿದ್ದಾನೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.
ಆರೋಪಿ ದಿಲೀಪ ಸಿಕ್ಕ ನಂತರ ಸತ್ಯಾಸತ್ಯತೆ ತಿಳಿಯಬೇಕಿದೆ. ಘಟನೆ ಸ್ಥಳಕ್ಕೆ ಸಿಪಿಐ ಲೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.