ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿ ಸಿನಿಮಾ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಮೋಹಕ ತಾರೆಯ ಕನಸಿನ ಕೂಸು ಸ್ವಾತಿ ಮುತ್ತಿನ ಮಳೆ ಹನಿಯೇ ನವೆಂಬರ್ ೨೪ರಂದು ಬಿಡುಗಡೆ ಆಗಲಿದೆ. ಅಂದಿನಿಂದ ರಾಜ್.ಬಿ. ಶೆಟ್ಟಿ ಹವಾ ಎನ್ನಲಾಗುತ್ತಿದೆ.
ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಬಳಿಕ ಸ್ವಾತಿ ಮುತ್ತಿನ ಮಳೆ ಹನಿಯೇ ನಿರ್ದೇಶನಕ್ಕೂ ಸೈ ಹೀರೋಗೂ ಸೈ ಎಂದು ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
ಒಂದು ವರ್ಷಕ್ಕೆ ಚಿತ್ರದ ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಬಗ್ಗೆ ಅಪಾರ ಕುತೂಹಲ ಮೂಡಿಸಿದೆ. ಅಲ್ಲದೆ, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.