ದಿಸ್ಪುರ್: ಸರ್ಕಾರಿ ನೌಕರರು ೨ನೇ ಮದುವೆಯಾಗುವುದನ್ನು ಅಸ್ಸಾಂ ಸರ್ಕಾರ ನಿರ್ಬಂಧಿಸಿದೆ. ಸರ್ಕಾರಿ ನೌಕರನ ಧರ್ಮ ೨ನೇ ಮದುವೆಗೆ ಅನುಮತಿಸಿದರೂ ಸರ್ಕಾರದ ಅನುಮತಿಯಿಲ್ಲದೆ ೨ನೇ ಮದುವೆ ಮಾಡಿಕೊಳ್ಳುವಂತಿಲ್ಲಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ತಿಳಿಸಿದ್ದಾರೆ.
ಎರಡು ಮದುವೆಗಳಿಂದ ಸರ್ಕಾರಿ ನೌಕರನ ಪಿಂಚಣಿಗಾಗಿ ಇಬ್ಬರು ಪತ್ನಿಯರು ಹೋರಾಟ ಮಾಡುವುದನ್ನು ನಾವು ಗಮನಿಸಿದ್ಧೇವೆ. ಅಸ್ಸಾಂನಲ್ಲಿ ಈ ಕಾನೂನು ಮೊದಲೇ ಇತ್ತು. ಅದನ್ನು ಕಠಿಣವಾಗಿ ಜಾರಿಗೆ ನಿರ್ಧಾರ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು ೫೮ ವರ್ಷಗಳ ಹಿಂದೆ ಅಸ್ಸಾಂನಲ್ಲಿ ಜಾರಿ ಮಾಡಲಾಗಿತ್ತು. ಮೊದಲ ಸಂಗಾತಿಯು ಜೀವಾಂತವಾಗಿರುವವರೆಗೆ ಸರ್ಕಾರ ಒಪ್ಪಿಗಿಯಿಲ್ಲದೆ ೨ನೇ ಮಹಿಳೆಯನ್ನು ಮದುವೆಯಾಗುವುದನ್ನುಕಾನೂನು ನಿರ್ಬಂಧಿಸುತ್ತದೆ.
ಮುಸ್ಲಿಮರನ್ನು ಉಲ್ಲೇಖಿಸದೆ ವೈಯಕ್ತಿಕ ಕಾನೂನಿನಿಂದ ಅನುಮತಿ ಪಡೆದ ಪುರುಷರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅದೇ ರೀತಿ ಮಹಿಳಾ ನೌಕರರು ಈ ಮೊದಲು ಮದುವೆಯಾಗಿರುವ ವ್ಯಕ್ತಿಯನ್ನು ೨ನೇ ಮದುವೆಯಾಗಬಾರದು ಎಂದು ಸೂಚಿಸಲಾಗಿದೆ.