2 ತಲೆ ಹಾವು, ಜೀವಂತ ಹಾವು ಹಾಗೂ ಕಾಡು ಪ್ರಾಣಿಗಳ ಕೊಂಬು, ಆನೆ ದಂತ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರಿನ ವಯ್ಯಾಲಿ ಕಾವಲ್ ಪೊಲೀಸರು ಬಂಧಿಸಿದ್ದಾರೆ.
ಚಂದ್ರೇಗೌಡ ಹಾಗೂ ಲೋಕೇಶ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ 2 ಎರಡು ತಲೆಯ ಹಾವುಗಳು, 12 ಜಿಂಕೆ ಕೊಂಬುಗಳು, ಆನೆಯ ದಂತ ವಶಕ್ಕೆ ಪಡೆಯಲಾಗಿದೆ.
ವಯ್ಯಾಲಿ ಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.