ಉಜ್ಜಯಿನಿ: ಮಧ್ಯಪ್ರದೇಶದ(Madhyapradesh) ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ಹಿಂದುತ್ವ, ದೇವರು ಇದ್ಯಾವುದು ಬಿಜೆಪಿಗರ ವೈಯಕ್ತಿಕ ಆಸ್ತಿಯಲ್ಲ ಎಂದು ಹೇಳಿದ್ದಾರೆ.
ಮಹಾಕಾಳೇಶ್ವರ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಅವರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಸ್ಮವನ್ನು ಸ್ವೀಕರಿಸಿದರು. “ಹಿಂದುತ್ವ, ದೇವಾಲಯಗಳು ಅಥವಾ ದೇವರು ಯಾವ ರಾಜಕೀಯ ಪಕ್ಷದ ಆಸ್ತಿಯಲ್ಲ!. ಅದು ಪ್ರತಿಯೊಬ್ಬರಿಗೂ ಮೀಸಲು. ಇದ್ಯಾವುದು ಕೂಡ ಬಿಜೆಪಿಯ(BJP) ವೈಯಕ್ತಿಕ ಆಸ್ತಿಯಲ್ಲ” ಎಂದು ಹೇಳಿದರು.
“ಸಮಾಜದ ಪ್ರತಿಯೊಂದು ವರ್ಗ, ಸಂಸ್ಕೃತಿ, ಧರ್ಮ ಮತ್ತು ಭಾಷೆಯಲ್ಲಿ ಕಾಂಗ್ರೆಸ್ಗೆ ಅಪಾರ ನಂಬಿಕೆ ಇದೆ. ಮಹಾಕಾಳೇಶ್ವರ ಸನ್ನಿಧಿಗೆ ಇದು ನನ್ನ ನಾಲ್ಕನೇ ಭೇಟಿ. ನನ್ನ ಕಷ್ಟದ ಸಮಯಗಳಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಚುನಾವಣೆಗೂ ಮುನ್ನ ಭಗವಂತನಲ್ಲಿ ಈ ಬಾರಿ ಅಧಿಕಾರ ಪ್ರಾಪ್ತಿಯಾಗುವಂತೆ ಪ್ರಾರ್ಥಿಸಿದ್ದೆ, ಅದರಂತೆಯೇ ಈಗ ನಮಗೆ ಅಧಿಕಾರ ಲಭಿಸಿದೆ” ಎಂದು ಸುದ್ದಿಗಾರರಿಗೆ ಹೇಳಿದರು,(ಏಜೆನ್ಸೀಸ್).