ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಸಚಿವ ಸಂತೋಷ ಲಾಡ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಅವಳಿ ನಗರಗಳು ಬೇರ್ಪಡುವ ಸಮಯ ಬಂದಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಯನ್ನು ಪ್ರತ್ಯೇಕವಾಗಿ ವಿಭಜಿಸುವಂತೆ ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ.
ಅವಳಿ ನಗರಗಳನ್ನು ಪ್ರತ್ಯೇಕ ಪಾಲಿಕೆ ಮಾಡಬೇಕು ಎಂದು ಧಾರವಾಡದ ಹಿರಿಯ ನಾಗರಿಕರು ಹಾಗೂ ಸಾಹಿತಿಗಳ ಒತ್ತಡ ಹಿನ್ನೆಲೆಯಲ್ಲಿ ಸರ್ಕಾರ ಪಾಲಿಕೆ ವಿಭಜನೆಗೆ ಮುಂದಾಗಿದೆ.
ಬಹಳ ವರ್ಷಗಳ ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ದೊರೆತಂತಾಗಿದ್ದು, ರಾಜ್ಯದ ಎರಡನೇ ಅತಿ ದೊಡ್ಡ ಪಾಲಿಕೆ ಆಗಿರುವ ಹು-ಧಾ ಮಹಾನಗರ ಪಾಲಿಕೆ 82 ವಾರ್ಡ್ ಗಳನ್ನು ಹೊಂದಿದೆ.
ಇತ್ತೀಚಿಗಷ್ಟೇ ಶಾಸಕ ಅರವಿಂದ್ ಬೆಲ್ಲದ ಅವರಿಂದಲೂ ಪ್ರತ್ಯೇಕ ಪಾಲಿಕೆ ಹೋರಾಟಕ್ಕೆ ಬೆಂಬಲ ದೊರೆತಂತಾಗಿದೆ. ಸಿಎಂ ಸಿದ್ದರಾಮಯ್ಯ ಗೆ ಪ್ರತ್ಯೇಕ ಪಾಲಿಕೆ ಮಾಡುವಂತೆ ಆಗ್ರಹಿಸಿ ಬೆಲ್ಲದ್ ಪತ್ರ ಬರೆದಿದ್ದರು.
ಧಾರವಾಡಕ್ಕೆ ಅನುದಾನ ಕೊರತೆ ಸೇರಿ ಅಭಿವೃದ್ದಿ ಕಾರ್ಯಗಳಲ್ಲಿ ಕುಂಠಿತ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರಾಭಿವೃದ್ದಿ ಸಚಿವರಿಂದ ಪಾಲಿಕೆ ವಿಸರ್ಜನೆಗೆ ಲಾಡ್ ಪತ್ರ ಬರೆದಿದ್ದಾರೆ.