ಹೃದಯವಿರುವ ಭಾಗದಲ್ಲಿ ಕೆಲವು ನಿಮಿಷಗಳವರೆಗೆ ನೋವು, ಒತ್ತಡ ಕಾಣಿಸಿಕೊಳ್ಳುತ್ತದೆ ಹಾಗೂ
ಈ ನೋವು ಮತ್ತೆ ಮತ್ತೆ ಆಗಬಹುದು. ಇದರಿಂದ ಎದೆಯ ಮೇಲೆ ಏನೋ ಒಂದುರೀತಿ ತುಂಬಾ ಭಾರವಾದಂತೆ ಅನಿಸುತ್ತದೆ. ಎದೆ ನೋವಿಲ್ಲದಿದ್ದರೂ, ಉಸಿರಾಟಕ್ಕೆ ಪದೇ ಪದೇ ತೊಂದರೆಯಾಗುತ್ತದೆ.
ಬೆನ್ನು, ಕುತ್ತಿಗೆ, ಗದ್ದ ಅಥವಾ ಹೊಟ್ಟೆಯಲ್ಲಿ ನೋವು, ಎರಡೂ ತೋಳು ಅಥವಾ ಎಡ ತೋಳು, ಎಡಗೈಯಲ್ಲಿ ನೋವು ಕಾಣಿಸಬಹುದು. ಇಡೀ ಮೈ ಬೆವೆತು ಪ್ರಾಣಭಯದಿಂದ ಒದ್ದಾಡುವಂತಹ ಸ್ಥಿತಿ ನಿರ್ಮಾಣವಾಗಬಹುದು.
ಮಹಿಳೆಯರಲ್ಲಿ ಉಸಿರಾಟದ ತೊಂದರೆ ಯೊಂದಿಗೆ ವಾಂತಿ, ಬೆನ್ನು ಅಥವಾ ಗದ್ದ ನೋವು ಕಾಣಿಸಿಕೊಳ್ಳುತ್ತದೆ.
ಎದೆ ನೋವಿನಿಂದ ಒದ್ದಾಡುತ್ತಿರುವಾಗ ವಾಂತಿ,ಮಲಮೂತ್ರ ವಿಸರ್ಜನೆಯು ಆಗಬಹುದು. ಇವೆಲ್ಲ ಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಜರುಗುತ್ತವೆ ನೆನಪಿರಲಿ.
ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ಯಾರಾದರೂ ಸಹಾಯಕ್ಕೆ ಬರುವವರೆಗೂ 2 ಸೆಕೆಂಡುಗಳಿಗೊಮ್ಮೆ ಕೆಮ್ಮುತ್ತಾ ಉಸಿರಾಡಬೇಕು ,ದೀರ್ಘ ಉಸಿರಾಟ ಮಾಡುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕ ಸಿಗುತ್ತೆ ನಂತರ ಕೆಮ್ಮುವುದರಿಂದ ಹೃದಯದ ರಕ್ತ ಚಲನೆ ಮತ್ತು ಚಟುವಟಿಕೆ ನಿಧಾನವಾಗಿ ಮುಂದುವರಿಯುತ್ತದೆ. ಇದರಿಂದ ಹೃದಯವು ಮಂಧ ಗತಿಯಲ್ಲಿಯಲ್ಲಾದರೂ ಕಾರ್ಯನಿರ್ವಹಿಸುತ್ತದೆ.
ನಂತರ ಏನಾದರೂ ಬೀಳಿಸುವ ಮೂಲಕ ಗಮನ ಸೆಳೆಯಿರಿ. ಸಾಧ್ಯವಾದರೆ ನಿಮ್ಮ ನೆರೆಹೊರೆಯವರಿಗೆ ಫೋನ್ ಮಾಡುವ ಮೂಲಕ ಸಹಾಯ ಕೇಳಿ.ಕೂಡಲೇ ಆಸ್ಪತ್ರೆಗೆ ದಾಖಲಾಗಿ , ವೈದ್ಯಕೀಯ ಪರೀಕ್ಷೆಗೆ ಒಳಗಾಗಿ .