ಆರಂಭಿಕ ಕ್ವಿಂಟನ್ ಡಿ ಕಾಕ್ ಸಿಡಿಸಿದ 174 ಮತ್ತು ಕ್ಲಾಸೆನ್ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 5 ವಿಕೆಟ್ ಗೆ 382 ರನ್ ಗಳ ಭಾರೀ ಮೊತ್ತ ದಾಖಲಿಸಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 382 ರನ್ ಗಳಿಸಿದೆ.
ಕ್ವಿಂಟನ್ ಡಿ ಕಾಕ್ 140 ಎಸೆತಗಳಲ್ಲಿ 15 ಬೌಂಡರಿ ಮತ್ತು 7 ಸಿಕ್ಸರ್ ಸೇರಿದಂತೆ 174 ರನ್ ಬಾರಿಸಿದರೆ, ಕ್ಲಾಸೆನ್ 49 ಎಸೆತಗಳಲ್ಲಿ 2 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 90 ರನ್ ಸಿಡಿಸಿದರು.
ನಾಯಕ ಏಡಿಯನ್ ಮರ್ಕರಂ 69 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 60 ರನ್ ಚಚ್ಚಿದರು. ಡೇವಿಡ್ ಮಿಲ್ಲರ್ 15 ಎಸೆತಗಳಲ್ಲಿ 1 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 34 ರನ್ ಚಚ್ಚಿದರು.