ಇಷ್ಟು ದಿನ ಕಿಂಗ್ ಕೊಹ್ಲಿಯ ಬ್ಯಾಟಿಂಗ್ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದ ಟೀಂ ಇಂಡಿಯಾ ಅಭಿಮಾನಿಗಳಿಗೆ ಅವರು ಬೌಲಿಂಗ್ ಮಾಡುವ ಸುವರ್ಣ ಗಳಿಕೆಯನ್ನು ನೋಡುವ ಅವಕಾಶವೂ ಒದಗಿ ಬಂದಿದೆ.
ಪುಣೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಕೇವಲ ಮೂರೇ ಮೂರು ಎಸೆತಗಳನ್ನು ಬೌಲ್ ಮಾಡುವ ಮೂಲಕ ಇಡೀ ಕ್ರೀಡಾಂಗಣವೇ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ವಾಸ್ತವವಾಗಿ ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವ ವೇಳೆ ಇಂಜುರಿಗೊಳಗಾಗಿದ್ದರಿಂದ ಓವರ್ ಅನ್ನು ಪೂರ್ಣಗೊಳಿಸುವ ಜವಬ್ದಾರಿಯನ್ನು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ನೀಡಿದರು.
ಬಾಂಗ್ಲಾದೇಶ ಇನ್ನಿಂಗ್ಸ್ನ 9ನೇ ಓವರ್ ಬೌಲ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ಓವರ್ನ ಮೂರನೇ ಎಸೆತವನ್ನು ಬೌಂಡರಿಗೆ ಹೋಗದಂತೆ ತಡೆಯುವ ಯತ್ನದಲ್ಲಿ ತಮ್ಮ ಕಾಲಿಗೆ ಗಾಯ ಮಾಡಿಕೊಂಡರು. ಹೀಗಾಗಿ ಪಾಂಡ್ಯಗೆ ಓವರ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅತೀವ ನೋವಿನಿಂದ ಬಳಲುತ್ತಿದ್ದ ಪಾಂಡ್ಯ ಪಿಸಿಯೋ ಸಹಾಯದಿಂದ ಮೈದಾನ ಕೂಡ ತೊರೆದರು. ಹೀಗಾಗಿ 9ನೇ ಓವರ್ನಲ್ಲಿ ಉಳಿದ ಮೂರು ಎಸೆತಗಳನ್ನು ಎಸೆಯಲು ವಿರಾಟ್ ಕೊಹ್ಲಿ ಅಖಾಡಕ್ಕಿಳಿದರು.