ಇಸ್ರೇಲ್ ಪರ ಪತ್ತೆದಾರಿ ನಡೆಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 8 ನಿವೃತ್ತ ನೌಕಾಪಡೆ ಯೋಧರಿಗೆ ಕತಾರ್ ಗಲ್ಲು ಶಿಕ್ಷೆ ವಿಧಿಸಿದೆ.
ಭಾರತದ ಯುದ್ಧ ನೌಕೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ 8 ಭಾರತೀಯ ಯೋಧರು ಕತಾರ್ ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಕತಾರ್ ಸೇನಾ ಪಡೆಗೆ ಈ ಖಾಸಗಿ ಕಂಪನಿ ನೆರವು ನೀಡುತ್ತಿತ್ತು ಎಂದು ಹೇಳಲಾಗಿದೆ. ಪತ್ತೆದಾರಿ ನಡೆಸುತ್ತಿದ್ದ ಆರೋಪದಲ್ಲಿ ಭಾರತೀಯ ನಿವೃತ್ತ ನೌಕಾಪಡೆ ನೌಕರರನ್ನು 2022 ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು.
ಕತಾರ್ ರಹಸ್ಯವಾಗಿ ನಿರ್ಮಿಸುತ್ತಿದ್ದ ನೌಕಾಪಡೆಯ ಯೋಜನೆಯ ಕುರಿತು ಈ 8 ಮಂದಿ ಭಾರತೀಯ ಯೋಧರು ಪತ್ತೆದಾರಿ ನಡೆಸುತ್ತಿದ್ದರು. ಈ ಮೂಲಕ ಇಸ್ರೇಲ್ ಪ್ರಚೋದಿತ ಭಯೋತ್ಪಾದನೆಗೆ ನೆರವಾಗುತ್ತಿದ್ದರು ಎಂದು ಆರೋಪಿಸಲಾಗಿದೆ.