ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ ದಿನದಿಂದ ದಿನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಕುಂಭ ಮೇಳದಲ್ಲಿ ಜನ ಭಾಗಿಯಾಗುತ್ತಿದ್ದಾರೆ. ಇದರ ನಡುವೆ ‘ಕೆಜಿಎಫ್ 2’ ನಟಿ ಶ್ರೀನಿಧಿ ಶೆಟ್ಟಿ ಅವರು ಮಾಸ್ಕ್ ಹಾಕಿಕೊಂಡೇ ಕುಂಭಮೇಳದಲ್ಲಿ ಭಾಗಿಯಾಗಿದ್ದಾರೆ. ತಮ್ಮ ಈ ಆಧ್ಯಾತ್ಮಿಕ ಅನುಭವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೌನಿ ಅಮಾವಾಸ್ಯೆಯಂದು ಮಹಾಕುಂಭ ಮೇಳದಲ್ಲಿನ ತ್ರಿವೇಣಿ ಸಂಗಮದಲ್ಲಿ ನಾನು ಪವಿತ್ರವಾದ ಸ್ನಾನ ಮಾಡುತ್ತೇನೆ ಎಂದು ಕನಸು ಮನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ. ಈ ಅದ್ಭುತವಾದ ಅನುಭವವನ್ನು ನಾನು ಸಂಪೂರ್ಣವಾಗಿ ಅನುಭವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಬದುಕು ಅಚ್ಚರಿಯ ಸಂತೆ ಈ ದೈವಿಕ ಅನುಗ್ರಹ ಮತ್ತು ಆಶೀರ್ವಾದದಿಂದ ನನ್ನ ಹೃದಯ ತುಂಬಿದೆ ಎಂದು ಹೇಳಿದ್ದಾರೆ.