ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿದಿದ್ದು 4-1 ಅಂತರದಿಂದ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಈ ಬೆನ್ನಲ್ಲೇ ಇಂಗ್ಲೆಂಡ್ ತಂಡದಲ್ಲಿದ್ದ, ಆರ್‌ಸಿಬಿ ಪ್ಲೇಯರ್‌ಗಳ ಕಳಪೆ ಪ್ರದರ್ಶನ ಫ್ರಾಂಚೈಸಿಗೆ ತಲೆನೋವು ತಂದಿಟ್ಟಿದೆ.

ಈ ಬಾರಿ ಐಪಿಎಲ್ ಹರಾಜಿನಲ್ಲಿ ಇಂಗ್ಲೆಂಡ್ ಸ್ಟಾರ್ ಪ್ಲೇಯರ್‌ಗಳಾದ ಜಾಕೊಬ್ ಬೆಥೆಲ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಫಿಲ್ ಸಾಲ್ಟ್ ಅವರನ್ನು ಆರ್‌ಸಿಬಿ ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ. ಈ ಮೂವರ ಬ್ಯಾಟಿಂಗ್ ವೈಫಲ್ಯ ಆರ್‌ಸಿಬಿ ಫ್ರಾಂಚೈಸಿ ಹಾಗೂ ಭಾರೀ ನಿರೀಕ್ಷೆ ಹೊತ್ತಿದ್ದ ಅಭಿಮಾನಿಗಳಿಗೆ ತಲೆನೋವು ತಂದಿದೆ.

ಫಿಲ್ ಸಾಲ್ಟ್ ಇಂಗ್ಲೆಂಡ್ ಆರಂಭಿಕ ಸ್ಫೋಟಕ ಬ್ಯಾಟರ್ ಎನಿಸಿಕೊಂಡಿರುವ ಸಾಲ್ಟ್ 5 ಪಂದ್ಯಗಳಿಂದ 0, 4, 5, 23, 55 ಕೇವಲ 87 ರನ್ ಕಲೆಹಾಕಿದ್ದಾರೆ. ಇದರಲ್ಲಿ 55 ಗರಿಷ್ಠ ರನ್ ಆಗಿದೆ. ಆಲ್‌ರೌಂಡರ್‌ ಲೀವಿಂಗ್ ಸ್ಟೋನ್ ಕೂಡ ಯಾವುದೇ ಮೋಡಿ ಮಾಡಿಲ್ಲ. 3ನೇ ಪಂದ್ಯದಲ್ಲಿ ಅಬ್ಬರಿಸಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳಲ್ಲೂ ಫ್ಲಾಪ್‌ ಪ್ರದರ್ಶನವನ್ನೇ ಮುಂದುವರಿಸಿದ್ರು. ಆಡಿದ 5 ಪಂದ್ಯದಲ್ಲಿ 0, 13, 43, 9, 9 ಕೇವಲ 74 ರನ್‌ ಹೊಡೆದು 1 ವಿಕೆಟ್ ಪಡೆದರು.

ಜಾಕೊಬ್ ಬೆಥೆಲ್ ತಾನು ಆಡಿದ 3 ಪಂದ್ಯಗಳಲ್ಲಿ 7, 6, 10 ಕೇವಲ 23 ರನ್ ಹೊಡೆದಿದ್ದಾರೆ. ಇತ್ತ ರಣಜಿ ಟ್ರೋಫಿಯಲ್ಲೂ ವಿರಾಟ್‌ ಫಾರ್ಮ್‌ ಕಳೆದುಕೊಂಡಿದ್ದು ʻಈ ಸಲ ಕಪ್‌ ನಮ್ದೇʼ ಅನ್ನೋ ಮಾತು, ಘೋಷಣೆಯಾಗಿಯೇ ಉಳಿಯುತ್ತಾ ಅಥವಾ ʻಇದು ಹೊಸ ಅಧ್ಯಾಯʼ ಅಂತ ಟ್ರೋಫಿ ಎತ್ತಿ ಹಿಡಿಯುತ್ತಾ ಅನ್ನೋದನ್ನು ಕಾದುನೋಡಬೇಕಿದೆ.

Leave a Reply

Your email address will not be published. Required fields are marked *