ನವದೆಹಲಿ : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಬ್ಲಾಕ್ ಮೈತ್ರಿಕೂಟದ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್‌ನ ನೈತಿಕ ಹತಾಶೆಯ ಸೋಲು, ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್ ನಲ್ಲಿ ಆಂತರಿಕ ವಿರೋಧಾಭಾಸಗಳನ್ನು ಹೊರತಂದಿದೆ. ಮೈತ್ರಿ ತಂತ್ರದಲ್ಲಿ ಎರಡೂ ಪಕ್ಷಗಳ ನಾಯಕರು ಒಮ್ಮತವನ್ನು ಹೊಂದಿಲ್ಲ ಎಂಬುದನ್ನು ತೋರಿಸುತ್ತದೆ. ಕಾಂಗ್ರೆಸ್ ನೊಳಗೆ ನಾಯಕರು ಮೈತ್ರಿಕೂಟ ರಚನೆ ಬಗ್ಗೆ ವಿಭಿನ್ನ ಅಭಿಪ್ರಾಯ ತಳೆದಿದ್ದಾರೆ.
ಕೆಲವು ಕಾಂಗ್ರೆಸ್ ನಾಯಕರು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಮೈತ್ರಿ ಮಾಡಿಕೊಳ್ಳಲು ಇಷ್ಟ ಹೊಂದಿರಲಿಲ್ಲ ಎಂದು ಪಕ್ಷದ ನಿಲುವನ್ನು ಸಮರ್ಥಿಸಿಕೊಂಡರೆ, ಮತ್ತೊಂದು ವರ್ಗವು ಆತ್ಮಾವಲೋಕನ ಮತ್ತು ಸುಸಂಬದ್ಧ ರಾಜಕೀಯ ತಂತ್ರಕ್ಕೆ ಕರೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡ ಕಾಂಗ್ರೆಸ್ ಸಂಸದ ತರಿಕ್ ಅನ್ವರ್, ಪಕ್ಷವು ತನ್ನ ರಾಜಕೀಯ ತಂತ್ರವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಹೇಳಿದ್ದಾರೆ. ಸಮ್ಮಿಶ್ರ ರಾಜಕೀಯ ಮಾಡಬೇಕೆ ಅಥವಾ ಏಕಾಂಗಿಯಾಗಿ ಹೋಗಬೇಕೆ ಎಂದು ಅವರು ನಿರ್ಧರಿಸಬೇಕು.
ಅಲ್ಲದೆ, ಪಕ್ಷದ ಸಂಘಟನೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಮತ್ತೊಬ್ಬ ನಾಯಕ ರಶೀದ್ ಅಲ್ವಿ, ಬಿಜೆಪಿಯನ್ನು ಸೋಲಿಸಲು ಸೋಲಿಸಬೇಕೆಂದರೆ ಕಾಂಗ್ರೆಸ್ ಪಕ್ಷವು ಇಂಡಿಯಾ ಬ್ಲಾಕ್ ನಲ್ಲಿರುವ ಎಲ್ಲಾ ಪಕ್ಷಗಳನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಈ ಚುನಾವಣೆಯಲ್ಲಿ ನಮ್ಮಿಂದಾಗಿ ಅವರು ಸೋತು ಬಿಜೆಪಿ ಗೆದ್ದಿದೆ ಎಂದು ಆಪ್ ಭಾವಿಸುವಂತೆ ಮಾಡಿದೆ. ನಾವು ಬಿಜೆಪಿಯನ್ನು ಸೋಲಿಸಬೇಕೆಂದರೆ ಇಂಡಿಯಾ ಮೈತ್ರಿಕೂಟದಲ್ಲಿರುವ ಎಲ್ಲಾ ಪಕ್ಷಗಳನ್ನು ಗೌರವಿಸಬೇಕು ಮತ್ತು ಒಕ್ಕೂಟವನ್ನು ಬಲಪಡಿಸಬೇಕು. ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯಲ್ಲಿ ವಿಪ್ ಮಾಣಿಕ್ಕಂ ಟ್ಯಾಗೋರ್, ಇಂಡಿಯಾ ಬಣವನ್ನು 2024 ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಚಿಸಲಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾಧಾರಿತ ಮೈತ್ರಿಗಳು ಮುಂದುವರಿಯುವುದು ಉತ್ತಮ ಎಂದರು.
ದೆಹಲಿ ಚುನಾವಣೆಯಿಂದ ಒಂದು ವಿಷಯವಂತೂ ಸ್ಪಷ್ಟವಾಗಿದೆ. ಇಂಡಿಯಾ ಮೈತ್ರಿಕೂಟವನ್ನು 2024 ರ ಸಾರ್ವತ್ರಿಕ ಚುನಾವಣೆಗಾಗಿ ರಚಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿ, ಚುನಾವಣೆಗಳಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಲಾಗಿತ್ತು. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ದೆಹಲಿಯಲ್ಲಿ ಮೈತ್ರಿ ಮಾಡಿಕೊಂಡಿವೆ ಆದರೆ ಪಂಜಾಬ್‌ನಲ್ಲಿ ಅಲ್ಲ ಎಂದಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ ಎಂದು ಡಿಸೆಂಬರ್ 1 ರಂದು ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ್ದರು. ನಮ್ಮ ಮೈತ್ರಿಕೂಟದ ಪಾಲುದಾರರು ಮೈತ್ರಿ ಬಗ್ಗೆ ಸೂಕ್ತ ವ್ಯಕ್ತಿಯನ್ನು ಪ್ರಶ್ನೆ ಮಾಡಬೇಕು ಎಂದು ಟ್ಯಾಗೋರ್ ಹೇಳುತ್ತಾರೆ.