ನೋಯ್ಡಾ : ಸಾಮಾನ್ಯವಾಗಿ ಮಕ್ಕಳಿಗೆ ನಾಯಿಗಳೆಂದರೆ ಭಯ ಇದ್ದೇ ಇರುತ್ತದೆ, ಅದರಲ್ಲೂ ಲಿಫ್ಟ್​ ಒಳಗೆಂದರೆ ತುಸು ಹೆಚ್ಚು. ನೋಯ್ಡಾದ ಅಪಾರ್ಟ್​ಮೆಂಟ್​ವೊಂದರ ಲಿಫ್ಟ್​ನಲ್ಲಿ ಮಹಿಳೆ ನಾಯಿಯ ಜತೆ ಬಂದಿದ್ದಕ್ಕೆ ಹೆದರಿದ ಬಾಲಕ ದಯವಿಟ್ಟು ನಾಯಿಯನ್ನು ಒಳಗೆ ಕರೆದುಕೊಂಡು ಬರಬೇಡಿ ಭಯ ಆಗುತ್ತೆ ಎಂದು ಬೇಡಿಕೊಂಡಿದ್ದ.

ಆದರೂ ಒಂದಿಷ್ಟು ಮಾನವೀಯತೆ ತೋರದೆ ನಾಯಿಯನ್ನು ಲಿಫ್ಟ್​ ಒಳಗೆ ಹತ್ತಿಸಿಕೊಂಡಿದ್ದಷ್ಟೇ ಅಲ್ಲದೆ, 8 ವರ್ಷದ ಬಾಲಕನನ್ನು ಲಿಫ್ಟ್​ನಿಂದ ಧರಧರನೆ ಎಳೆದು ಹೊರಗೆ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ. ಗೌರ್ ಸಿಟಿ 2 ಸೊಸೈಟಿಯ 12 ನೇ ಅವೆನ್ಯೂದ ಲಿಫ್ಟ್‌ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕೋಪಗೊಂಡ ನಿವಾಸಿಗಳು ಹೊರಗೆ ಮಹಿಳೆಯ ವಿರುದ್ಧ ಪ್ರತಿಭಟನೆ ನಡೆಸಿ, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸೊಸೈಟಿಯ ನಿವಾಸಿ ಎಂಟು ವರ್ಷದ ಬಾಲಕ ಟ್ಯೂಷನ್‌ನಿಂದ ಹಿಂತಿರುಗಿ ತನ್ನ ಫ್ಲಾಟ್‌ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನಾಯಿ ಕೊರಳಿಗೆ ಬೆಲ್ಟ್​ ಕೂಡ ಇಲ್ಲದಿದ್ದಕ್ಕೆ ಬಾಲಕ ಮತ್ತಷ್ಟು ಭಯಗೊಂಡಿದ್ದ. ಈ ಹಿಂದೆಯೂ ಮಹಿಳೆ ನಾಯಿಗಳ ವಿಷಯವಾಗಿ ಜಗಳವಾಡಿದ್ದಳು ಎಂದು ಕೆಲವು ನಿವಾಸಿಗಳು ಹೇಳಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *