ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಇಂದು ತನ್ನ ತವರು ಮೈದಾನದಲ್ಲಿ ಅಂದರೆ ಬೆಂಗಳೂರಿನಲ್ಲಿ ಮೊದಲ ಪಂದ್ಯವನ್ನು ಆಡಲಿದೆ.
ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ಬಲಿಷ್ಠ ತಂಡಗಳನ್ನು ಮಕಾಡೆ ಮಲಗಿಸಿರುವ ಸ್ಮೃತಿ ಪಡೆಗೆ ಇಂದು ಮತ್ತೊಂದು ಅಗ್ನಿಪರೀಕ್ಷೆ ಎದುರಾಗಲಿದೆ. ಏಕೆಂದರೆ ಆರ್ಸಿಬಿಯ ಇಂದಿನ ಎದುರಾಳಿ ಮೊದಲ ಆವೃತ್ತಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್.
ಇಂದು ಮೈದಾನದಲ್ಲಿ ನಡೆಯಲಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆರ್‌ಸಿಬಿ ಈ ಸೀಸನ್ನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನ ನೀಡಿದ್ದು, ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಆರ್‌ಸಿಬಿ ಈಗ ಮುಂಬೈ ಇಂಡಿಯನ್ಸ್ ವಿರುದ್ಧ ಹ್ಯಾಟ್ರಿಕ್ ಗೆಲುವಿನತ್ತ ಗಮನ ಹರಿಸಿದೆ.
ಮುಂಬೈ ಇಂಡಿಯನ್ಸ್ : ಹರ್ಮನ್ಪ್ರೀತ್ ಕೌರ್ (ನಾಯಕಿ), ಯಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ನಾಡಿನ್ ಡಿ ಕ್ಲರ್ಕ್, ಸಂಸ್ಕೃತಿ ಗುಪ್ತಾ, ಸೈಕಾ ಇಶಾಕ್, ಶಬ್ನಿಮ್ ಇಸ್ಮಾಯಿಲ್, ಜಿಂಟಿಮಣಿ ಕಲಿತಾ, ಜಿ ಕಮಲಿನಿ, ಅಮನ್‌ದೀಪ್ ಕೌರ್, ಅಮನ್‌ಜೋತ್ ಕೌರ್, ಸತ್ಯಮೂರ್ತಿ ಕೀರ್ತನಾ, ಅಮೇಲಿಯಾ ಕೆರ್, ಅಕ್ಷಿತಾ ಮಹೇಶ್ವರಿ, ಹೇಲಿ ಮ್ಯಾಥ್ಯೂಸ್, ಸಜೀವನ್ ಸಜ್ನಾ, ನಾಟ್ ಸಿವರ್-ಬ್ರಂಟ್, ಪರುಣಿಕಾ ಸಿಸೋಡಿಯಾ, ಕ್ಲೋಯ್ ಟ್ರಯಾನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ಕನಿಕಾ ಅಹುಜಾ, ಏಕ್ತಾ ಬಿಶ್ತ್, ಚಾರ್ಲಿ ಡೀನ್, ಕಿಮ್ ಗಾರ್ತ್, ರಿಚಾ ಘೋಷ್, ಹೀದರ್ ಗ್ರಹಾಂ, ವಿಜೆ ಜೋಶಿತಾ, ಸಬ್ಬಿನೇನಿ ಮೇಘನಾ, ನುಝತ್ ಪರ್ವೀನ್, ಜಾಗ್ರವಿ ಪವಾರ್, ಎಲ್ಲಿಸ್ ಪೆರ್ರಿ, ರಾಘವಿ ಬಿಸ್ಟ್, ಸ್ನೇಹ್ ರಾಣಾ, ಪ್ರೇಮಾ ರಾವತ್, ರೇಣುಕಾ ಸಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಡ್ಯಾನಿ ವ್ಯಾಟ್-ಹಾಡ್ಜ್.