ಮಹಿಳಾ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ನಡೆದ ಮೊದಲ ಸೂಪರ್‌ ಓವರ್‌ನಲ್ಲಿ ಯುಪಿ ವಾರಿಯರ್ಸ್‌ ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದೆ. ಸೋಫಿ ಎಕ್ಲೆಸ್ಟೋನ್ ಅವರ ಆಲ್‌ರೌಂಡರ್‌ ಆಟದ ಪ್ರದರ್ಶನದಿಂದ ತವರಿನಲ್ಲಿ ಆರ್‌ಸಿಬಿ ಸೋತಿದೆ.

ಕಿಮ್ ಗಾರ್ತ್ ಎಸೆದ ಸೂಪರ್‌ ಓವರ್‌ನಲ್ಲಿ ಯುಪಿ 8 ರನ್‌ ಗಳಿಸಿತು. ಚಿನೆಲ್ಲೆ ಹೆನ್ರಿ 4 ರನ್‌ ಹೊಡೆದು ಔಟಾದರು. ಸೋಫಿ ಎಕ್ಲೆಸ್ಟೋನ್ ಮತ್ತು ಹ್ಯಾರಿಸ್‌ ತಲಾ ಒಂದು ರನ್‌ ಹೊಡೆದರು. ಇತರೇ ರೂಪದಲ್ಲಿ 2 ರನ್‌ ಬಂದಿತ್ತು.

ಆರ್‌ಸಿಬಿ ಪರ ಬ್ಯಾಟ್‌ ಬೀಸಲು ಬಂದವರು ನಾಯಕಿ ಸ್ಮೃತಿ ಮತ್ತು ರಿಚಾ ಘೋಷ್‌. ಬೌಲಿಂಗ್‌ ಮಾಡಿದವರು ಸೋಫಿ ಎಕ್ಲೆಸ್ಟೋನ್. ಸೋಫಿ ಕೇವಲ 4 ರನ್‌ ಮಾತ್ರ ಬಿಟ್ಟು ಕೊಟ್ಟು ಪಂದ್ಯವನ್ನು ಗೆಲ್ಲಿಸಿಕೊಟ್ಟರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಗಳಿಸಿತು. ನಂತರ ಬ್ಯಾಟ್‌ ಮಾಡಿದ ಯುಪಿ ವಾರಿರ್ಯರ್ಸ್‌ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದರೂ ಸೋಫಿ ಎಕ್ಲೆಸ್ಟೋನ್ ಕೊನೆಯಲ್ಲಿ ಸಿಕ್ಸ್‌, ಬೌಂಡರಿ ಸಿಡಿಸಿದ ಪರಿಣಾಮ ಪಂದ್ಯ ಟೈ ಆಗಿ ಸೂಪರ್‌ ಓವರ್‌ ಕಡೆ ತಿರುಗಿತು.

Leave a Reply

Your email address will not be published. Required fields are marked *