ಕಲಬುರಗಿ : ಪ್ರತಿ ವರ್ಷ ಶಿವರಾತ್ರಿ ಬಂದ್ರೆ ಸಾಕು ಕಲಬುರಗಿಯ ವಿವಾದಿತ ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ಶಿವಲಿಂಗ ಪೂಜೆ ವಿವಾದ ಜೋರಾಗುತ್ತದೆ. ಅದೇ ರೀತಿ ಈ ಬಾರಿ ಸಹ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದ ಎದಿದ್ದು ಹಿಂದೂಗಳ ಪೂಜೆಗೆ ನ್ಯಾಯಲಯ ಗ್ರೀನ್ ಸಿಗ್ನಲ್ ನೀಡಿದೆ.
ಆ ಮೂಲಕ ಮಹಾ ಶಿವರಾತ್ರಿಯಂದು ರಾಘವ ಚೈತನ್ಯ ಶಿವಲಿಂಗದ ಪೂಜೆಗೆ ಹಿಂದೂಗಳು ಉತ್ಸುಕರಾಗಿದ್ದಾರೆ. ಈಗಾಗಲೇ ಪೂಜೆ ಸಲ್ಲಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇಂದು ಯಾರ್ಯಾರು ಪೂಜೆಗೆ ತೆರಳುತ್ತರೆ ಎನ್ನುವ ಪಟ್ಟಿ ಸಿದ್ಧಪಡಿಸಲಿದ್ದರೆ. ಬಳಿಕ ಪೂಜೆಗೆ ದರ್ಗಾಕ್ಕೆ ತೆರಳುವ 15 ಜನರ ಪಟ್ಟಿಯನ್ನು ಪೊಲೀಸರಿಗೆ ನಿಡಲಾಗುತ್ತದೆ. ಬಳಿಕ ಹಿಂದೂ ಕಾರ್ಯಕರ್ತರಿಂದ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆ ವರೆಗೆ ಶಿವಲಿಂಗ ಪೂಜೆ ನೆರವೇರಲಿದೆ.
ಲಾಡ್ಲೇ ಮಶಾಕ್ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆಗೆ ಹೈಕೋರ್ಟ್ ಅವಕಾಶ ಹಿನ್ನಲೆ ಹಿಂದೂ ಕಾರ್ಯಕರ್ತರಿಂದ ಪೂಜೆ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು 163 ಅನ್ವಯ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಜೊತೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.