ಪ್ರತಿಷ್ಠಿತ 2025ರ ಆಸ್ಕರ್ ಪ್ರಶಸ್ತಿ – 2025 ಪ್ರಕಟವಾಗಿದ್ದು, ಅಮೆರಿಕದ ಲಾಸ್ ಏಜಂಲಿಸ್ನಲ್ಲಿರುವ ಡಾಲ್ಬಿ ಥಿಯೇಟರ್ನಲ್ಲಿ 97ನೇ ವರ್ಷದ ಅವಾರ್ಡ್ ಫಂಕ್ಷನ್ ಜರುಗಿದೆ. ‘ಅನೋರಾ’ ಹಾಗೂ ‘ದಿ ಬ್ರೂಟಲಿಸ್ಟ್’ ಚಿತ್ರಗಳು ಹೆಚ್ಚಿನ ಅವಾರ್ಡ್ ಪಡೆದವು. ಈ ಪೈಕಿ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಅಮೆರಿಕದಲ್ಲಿ ಉಂಟಾದ ಕಾಡ್ಗಿಚ್ಚಿನ ಕಾರಣಕ್ಕೆ ಈ ಬಾರಿ ಆಸ್ಕರ್ ಅವಾರ್ಡ್ ನಡೆಯುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ ಅದ್ಧೂರಿಯಾಗಿ ಕಾರ್ಯಕ್ರಮ ಜರುಗಿದೆ. ಕಾಡ್ಗಿಚ್ಚಿನ ವಿರುದ್ಧ ಹೋರಾಡಿದ ಅಗ್ನಿಶಾಮಕ ದಳದವರಿಗೆ ವೇದಿಕೆ ಮೇಲೆ ಗೌರವ ಸೂಚಿಸಲಾಯ್ತು. ಹಲವು ಸಿನಿಮಾಗಳಿಗೆ ಪ್ರಶಸ್ತಿ ಅನೌನ್ಸ್ ಮಾಡಲಾಗಿದೆ.
97ನೇ ಸಾಲಿನ 2025ರ ಆಸ್ಕರ್ ಅವಾರ್ಡ್ ಗೆದ್ದವರ ಸಂಪೂರ್ಣ ವಿವರ :-
ಅತ್ಯುತ್ತಮ ನಟ : ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್)
ಅತ್ಯುತ್ತಮ ನಟಿ : ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ಚಿತ್ರ : ಅನೋರಾ
ಅತ್ಯುತ್ತಮ ನಿರ್ದೇಶಕ : ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರ – ಫ್ಲೋ
ಅತ್ಯುತ್ತಮ ವಸ್ತ್ರವಿನ್ಯಾಸ – ಪಾಲ್ ತಾಜ್ವೆಲ್ (ವಿಕೆಡ್)
ಅತ್ಯುತ್ತಮ ಮೂಲ ಚಿತ್ರಕಥೆ – ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ಮೇಕಪ್, ಕೇಶವಿನ್ಯಾಸ – ದಿ ಸಬ್ಸ್ಟೆನ್ಸ್
ಅತ್ಯುತ್ತಮ ಮೂಲ ಗೀತೆ – ಎಲ್ ಮಾಲ್
ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ – ದಿ ಓನ್ಲಿ ಗರ್ಲ್ ಇನ್ ದಿ ಆರ್ಕೆಸ್ಟಾ
ಅತ್ಯುತ್ತಮ ಸಾಕ್ಷ್ಯಚಿತ್ರ – ನೋ ಅದರ್ ಲ್ಯಾಂಡ್
ಅತ್ಯುತ್ತಮ ಎಡಿಟಿಂಗ್ – ಸೀನ್ ಬೇಕರ್ (ಅನೋರಾ)
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ – ಇನ್ ದಿ ಶ್ಯಾಡೋ ಆಫ್ ದಿ ಸೈಪ್ರೆಸ್
ಅತ್ಯುತ್ತಮ ಧ್ವನಿ ವಿಭಾಗ – ಡ್ಯೂನ್ – ಭಾಗ 2 ಚಲನಚಿತ್ರ
ಅತ್ಯುತ್ತಮ ದೃಶ್ಯ ಪರಿಣಾಮಗಳು – ಡ್ಯೂನ್ ಭಾಗ 2
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ – ಐ ಆಮ್ ನಾಟ್ ಎ ರೋಬೋಟ್
ಅತ್ಯುತ್ತಮ ಛಾಯಾಗ್ರಹಣ – ದಿ ಬ್ರೂಟಲಿಸ್ಟ್
ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ – ಐ ಆಮ್ ಸ್ಟಿಲ್ ಹಿಯರ್ (ಬ್ರೆಜಿಲ್)