ಬೆಂಗಳೂರು : ಡಿಸಿಎಂ ವಾರ್ನಿಂಗ್ ಮಾಡೋದು ಸರಿಯಲ್ಲ. ಗೋಕಾಕ್ ಚಳವಳಿ ಮಾಡಿ ಚಿತ್ರರಂಗ ಸರ್ಕಾರವನ್ನೇ ಬೀಳಿಸಿತ್ತು ಎಂದು ನಿರ್ಮಾಪಕ ಸಾರಾ ಗೋವಿಂದು ಎಚ್ಚರಿಕೆ ನೀಡಿದರು.
ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಭಾಷೆಗೆ ಅನ್ಯಾಯವಾದಾಗ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದೆ. ಮಾತು ಅತಿರೇಕಕ್ಕೆ ಹೋಗಬಾರದು. ಕಲಾವಿದರಿಗೆ ಗೌರವ ಕೊಡಬೇಕು. ನಿಮ್ಮ ಮಾತಿನ ನೋವು ನಮಗೆ ಅರ್ಥವಾಗುತ್ತದೆ. ಆದರೆ ನಾವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಮಹದಾಯಿ, ಕಳಸ ಬಂಡೂರಿ ವಿಚಾರಕ್ಕೆ ಬಂದಾಗ ನಾವು ಹೋರಾಟ ಮಾಡಿದ್ದೇವೆ ಎಂದು ಹೇಳಿದರು.
ಕನ್ನಡ ಪರ ಸಂಘಟನೆಗಳು ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತು. ರಾಜಭವನ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಹಿನ್ನೆಲೆ ರಾಜಭವನಕ್ಕೆ ಮುತ್ತಿಗೆ ಹಾಕಲು ಬಂದ ಕನ್ನಡಪರ ಸಂಘಟನೆಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ ಎಂದರು.