ದುಬೈ : ಬಲಿಷ್ಠ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಭಾರತ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪ್ರವೇಶಿಸಿದೆ. ಈ ಮೂಲಕ 2023ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಸೋಲಿಗೆ ಸೇಡು ತೀರಿಸಿತು.

ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ 264 ರನ್‌ಗಳಿಗೆ ಆಲೌಟ್‌ ಆಗಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ 48.1 ಓವರ್‌ಗಳಲ್ಲಿ 267 ರನ್‌ ಹೊಡೆಯುವ ಮೂಲಕ ಫೈನಲ್‌ ಪ್ರವೇಶಿಸಿತು. ತಾಳ್ಮೆಯ ಆಟವಾಡಿ ಭಾರತ ಫೈನಲ್‌ ಪ್ರವೇಶಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ವಿರಾಟ್‌ ಕೊಹ್ಲಿಗೆ ಅರ್ಹವಾಗಿಯೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು ಎನ್ನಲಾಗಿದೆ.

ವಿರಾಟ್‌ ಕೊಹ್ಲಿ 84 ರನ್‌ (98 ಎಸೆತ, 5 ಬೌಂಡರಿ), ಶ್ರೇಯಸ್‌ ಅಯ್ಯರ್‌ 45 ರನ್‌(62 ಎಸೆತ, 3 ಬೌಂಡರಿ), ಕೆಎಲ್‌ ರಾಹುಲ್‌ ಔಟಾಗದೇ 42 ರನ್‌ (34 ಎಸೆತ, 2 ಬೌಂಡರಿ, 2 ಸಿಕ್ಸ್‌), ಹಾರ್ದಿಕ್‌ ಪಾಂಡ್ಯ 28 ರನ್‌ (24 ಎಸೆತ, 1 ಬೌಂಡರಿ, 3 ಸಿಕ್ಸ್‌) ಹೊಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು.

ಎರಡನೇ ಸೆಮಿಫೈನಲ್‌ ಪಂದ್ಯ, ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ನಡೆಯಲಿದೆ. ಈ ಪಂದ್ಯದಲ್ಲಿ ವಿಜೇತರಾದವರು ದುಬೈ ಮೈದಾನದಲ್ಲಿ ಭಾರತವನ್ನು ಎದುರಿಸಲಿದ್ದಾರೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾ ಪರವಾಗಿ ನಾಯ ಸ್ವೀವ್‌ ಸ್ಮಿತ್‌ 73 ರನ್‌( 4 ಬೌಂಡರಿ, 1 ಸಿಕ್ಸ್‌), ಅಲೆಕ್ಸ್‌ ಕ್ಯಾರಿ 61 ರನ್‌( 57ಎಸೆತ, 8 ಬೌಂಡರಿ, 1 ಸಿಕ್ಸ್‌) ಹೊಡೆದರು. ಮೊಹಮ್ಮದ್‌ ಶಮಿ 3 ವಿಕೆಟ್‌, ವರುಣ್‌ ಚಕ್ರವರ್ತಿ ಮತ್ತು ಜಡೇಜಾ ತಲಾ 2 ವಿಕೆಟ್‌, ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *