ಹುಬ್ಬಳ್ಳಿ : ರನ್ಯಾ ರಾವ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಿರ್ವಹಣೆ ನೋಡಿದರೆ, ಯಾರನ್ನೋ ರಕ್ಷಣೆ ಮಾಡಲು ಪ್ರಯತ್ನ ಮಾಡುತ್ತಿದ್ದಂತೆ ಕಾಣುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ, ಸಾಲು ಸಾಲಾಗಿ ಇಷ್ಟು ಆರೋಪಗಳು ಬರುತ್ತಿರುವುದು ನೋಡಿದರೆ ಇದರಲ್ಲಿ ರಾಜಕಾರಣಿಗಳು ಇರುವುದು ಸ್ಪಷ್ಟವಾಗುತ್ತಿದೆ. ಯಾರೋ ಮಂತ್ರಿಯನ್ನು ರಕ್ಷಣೆ ಮಾಡುವ ಕಾರ್ಯ ನಡೆದಿದೆ ಎಂದರು.

ಇದು ದೇಶದ್ರೋಹದ ಕೆಲಸವಾಗಿದ್ದು, ಅಕ್ರಮವಾಗಿ ತಂದ ಬಂಗಾರ ಎಲ್ಲಿಗೆ ಹೋಗುತ್ತಿತ್ತು. ದೇಶದ್ರೋಹಿಗಳಿಗಾ, ನಕ್ಸಲ್‌ಗಳಿಗಾ, ಎಲ್ಲಿಗೆ ಹೋಗುತ್ತಿತ್ತು? ಇದರಲ್ಲಿ ಸರ್ಕಾರ ಯಾರನ್ನು ರಕ್ಷಣೆ ಮಾಡಲು ಹೊರಟಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಇದೆ ಎಂಬ ಅನುಮಾನವಿದೆ. ಡಿಐಜಿ ಮಗಳು ಇದ್ದಾರೆ ಎನ್ನುವ ಆರೋಪಯಿದೆ ಎಂದು ದೂರಿದ್ದಾರೆ.

ಸಿಐಡಿಗೆ ತನಿಖೆಗೆ ಯಾಕೆ ನೀಡಿದರು. ಒಬ್ಬ ಡಿಐಜಿಯನ್ನು ಒಬ್ಬ ಸಿಐಡಿ ಎಸ್‌ಪಿ ತನಿಖೆ ಮಾಡಲು ಆಗುತ್ತಾ? ಗೃಹ ಸಚಿವ ಪರಮೇಶ್ವರ ಅವರೇ ಯಾರದ್ದೋ ಒತ್ತಡದಿಂದ ಹೇಳಿಕೆ ನೀಡಬೇಡಿ ಎಂದಿದ್ದಾರೆ. ಇನ್ನೂ ಧರ್ಮಾಧಾರಿತ ಮೀಸಲಾತಿ ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ನಾವು ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ.

ಯಾವ ಜಮೀರ್ ಅಹ್ಮದ್ ಹೇಳಿದ್ರೂ ಆಗಲ್ಲ. ಈ ಹಿಂದೆ ಜಮೀರ್ ನೀಡಿದ್ದ ಒಂದು ಹೇಳಿಕೆ ಏನಾಗಿದೆ ಗೊತ್ತು ಎಷ್ಟು ಆತ್ಮಹತ್ಯೆಗಳಾಗಿವೆ. 40 ಪರ್ಸೆಂಟ್ ಕಮಿಷನ್ ತನಿಖೆ ನ್ಯಾಯಯುತವಾಗಿ ಆಗಬೇಕು. ರಿಪೋರ್ಟ್ ಮಂಡಿಸಿ, ನೀವು ಯಾರಿಗೆ ನೋಟಿಸ್ ಕೊಟ್ಟಿದೀರಿ ನಮಗೆ ಗೊತ್ತಿರುವ ಹಾಗೆ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಆರೋಪ ಬಂದವರಿಗೆ ನೋಟಿಸ್ ಕೊಟ್ಟಿಲ್ಲ. ಮೊದಲು ನೋಟಿಸ್ ಕೊಡಿ ನೋಟಿಸ್ ಬಂದ ಮೇಲೆ ನಾವು ಉತ್ತರ ಕೊಡುತ್ತೇವೆ. ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *