ಚಿಕ್ಕಮಗಳೂರು : ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ ದಂಪತಿ ಚಿಕ್ಕಮಗಳೂರು
ಜಿಲ್ಲೆಯ ಕಳಸ ತಾಲೂಕಿನ ಆಧಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ದಂಪತಿಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಆತ್ಮೀಯವಾಗಿ ಸ್ವಾಗತ ಕೋರಿದೆ. ಕುಟುಂಬ ಸಮೇತರಾಗಿ ಆಗಮಿಸಿರುವ ತೇಜಸ್ವಿ ಸೂರ್ಯ ದಂಪತಿ ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಮಾಡಿಸಿ, ದರ್ಶನ ಪಡೆದಿದ್ದಾರೆ.
ಹೊರನಾಡು ಕ್ಷೇತ್ರದ ಧರ್ಮ ಕರ್ತರಾದ ಭೀಮೇಶ್ವರ ಜೋಶಿ ಅವರು ತೇಜಸ್ವಿ ಸೂರ್ಯ ದಂಪತಿಗೆ ಆಶೀರ್ವಾದ ಮಾಡಿದ್ದಾರೆ ಎನ್ನಲಾಗಿದೆ.