ಯಾವಾಗಲೂ ಹೆಣ್ಣುಮಕ್ಕಳನ್ನು ಬೈಯುವಾಗ ಬಿರುಗಾಳಿ ,  ಸುಂಟಗಾಳಿ ಅಂತೆಲ್ಲಾ ಹೇಳುವುದುಂಟು. ಹಾಗೆಯೇ ಸ್ತ್ರೀಯರ ಹೆಸರಿರುವ ಚಂಡಮಾರುತ(Cyclone)ಗಳು ಕೂಡ ತುಂಬಾ ಅಪಾಯಕಾರಿ ಎಂದು ಅಧ್ಯಯನವೊಂದು ಹೇಳಿದ್ದು, ಆಶ್ಚರ್ಯ ಮೂಡಿಸಿದೆ.

Cyclone: ಸ್ತ್ರೀಯರ ಹೆಸರಿರುವ ಚಂಡಮಾರುತಗಳು ತುಂಬಾ ಅಪಾಯಕಾರಿಯಂತೆ!

ಚಂಡಮಾರುತ

ಯಾವಾಗಲೂ ಹೆಣ್ಣುಮಕ್ಕಳನ್ನು ಬೈಯುವಾಗ ಬಿರುಗಾಳಿ ,  ಸುಂಟಗಾಳಿ ಅಂತೆಲ್ಲಾ ಹೇಳುವುದುಂಟು. ಹಾಗೆಯೇ ಸ್ತ್ರೀಯರ ಹೆಸರಿರುವ ಚಂಡಮಾರುತ(Cyclone)ಗಳು ಕೂಡ ತುಂಬಾ ಅಪಾಯಕಾರಿ ಎಂದು ಅಧ್ಯಯನವೊಂದು ಹೇಳಿದ್ದು, ಆಶ್ಚರ್ಯ ಮೂಡಿಸಿದೆ. ಚಂಡಮಾರುತದಿಂದಾಗಿ ಸುರಿಯುವ ಮಳೆಯ ಆರ್ಭಟ, ಅದರ ರೌದ್ರಾವತಾರ ನೋಡುವಾಗ ಎಷ್ಟು ಭಯಭೀತರಾಗುತ್ತೇವೆ ಆದರೆ ಅದರ ಹೆಸರುಗಳು ಮಾತ್ರ ಎಷ್ಟು ಶಾಂತ ಹಾಗೂ ಸುಂದರವಾಗಿರುತ್ತದೆ.

ಸ್ತ್ರೀಯರ ಹೆಸರಿರುವ ಚಂಡಮಾರುತಗಳ ಅಬ್ಬರ ಕಡಿಮೆ ಇರುವುದಿಲ್ಲ, ಬದಲಾಗಿ ಹೆಚ್ಚಾಗಿರುತ್ತದೆ, ಹೆಣ್ಣುಮಕ್ಕಳ ಹೆಸರಿರುವ ಚಂಡಮಾರುತಗಳು ಹೆಚ್ಚು ಮಾರಣಾಂತಿಕವಾಗಿರುತ್ತವೆ ಎಂದು ಅಧ್ಯಯನವೊಂದು ಹೇಳಿದೆ.

ಈ ಹಿಂದೆ ಆರ್ಭಿಟಿಸಿದ ಚಂಡಮಾರುತಗಳ ಹೆಸರನ್ನೇ ನೋಡಿ ಬುರೇವಿ, ಲೈಲಾ, ಫೇಟ್, ಕತ್ರಿನಾ, ಹರಿಕೇನ್ ಐಲಾ, ಫಾನ್ ಹೀಗೆ ಇವುಗಳ ಹೆಸರಗಳು ಒಂದಕ್ಕಿಂತಾ ಒಂದು ಸೊಗಸಾಗಿವೆ. ಈ ಹೆಸರುಗಳನ್ನು ನೋಡುವಾಗ ಈ ಚಂಡಮಾರುತಕ್ಕೆ ಯಾರು ಹೆಸರು ಆಯ್ಕೆ ಮಾಡುತ್ತಾರೆ ಎನ್ನುವ ಕುತೂಹಲ ಹುಟ್ಟುವುದು ಸಹಜ.

ಚಂಡಮಾರುತ ಹೇಗೆ ಉಂಟಾಗುತ್ತದೆ? ಚಂಡಮಾರುತ ಎಂಬುದು ಹವಾಮಾನಕ್ಕೆ ಸಂಬಂಧಿಸಿದ ವಿದ್ಯಾಮಾನವಾಗಿದೆ. ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದಾಗ ಗಾಳಿ ಜೋರಾಗಿ ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆ ಪಥದಲ್ಲಿ ಸುರುಳಿ ಸುತ್ತುತ್ತಾ ಹೋಗುತ್ತದೆ.

ಅಧ್ಯಯನದಲ್ಲಿ ಅಮೆರಿಕದಲ್ಲಿ 1950-2012ರವರೆಗೆ ಸಂಭವಿಸಿದ ಚಂಡಮಾರುತಗಳಿಂದ ಉಂಟಾದ ಸಾವಿನ ಪ್ರಮಾಣವನ್ನು ಗಮನಿಸುವುದಾದರೆ ಹೆಣ್ಣುಮಕ್ಕಳ ಹೆಸರಿನಲ್ಲಿರುವ ಚಂಡಮಾರುತಗಳು ಹೆಚ್ಚು ಸಾವಿಗೆ ಕಾರಣವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಣ್ಣುಮಕ್ಕಳ ಹೆಸರಿನ ಚಂಡಮಾರುತಗಳು 41.84 ರಷ್ಟು ಸಾವಿಗೆ ಕಾರಣವಾದರೆ ಪುರುಷರ ಹೆಸರಿನ ಚಂಡಮಾರುತಗಳು 15.15ರಷ್ಟು ಸಾವಿಗೆ ಕಾರಣವಾಗಿದೆ.

1979ರವರೆಗೆ ಎಲ್ಲಾ ಚಂಡಮಾರುತಗಳು ಸ್ತ್ರೀ ಹೆಸರುಗಳನ್ನೇ ಹೊಂದಿದ್ದವು. ಸುಮಾರು 29 ವರ್ಷಗಳ ಕಾಲ ಪುರುಷರ ಹೆಸರು ಇರಲಿಲ್ಲ. ಇನ್ನು ನೀವು ಹರಿಕೇನ್‌, ಸೈಕ್ಲೋನ್, ಟೈಫೂನ್ ಬೀಸುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಹೇಳುವುದನ್ನು ಕೇಳಿರಬಹುದು.

ಇದೆಲ್ಲವೂ ಬೇರೆ-ಬೇರೆ ಇರಬಹುದೇ ಎಂದು ನೀವಂದುಕೊಂಡಿದ್ದರೆ ಕಂಡಿತ ಅಲ್ಲ, ಎಲ್ಲವೂ ಒಂದೇ ಆದರೆ ಅದು ಎಲ್ಲಿ ಹುಟ್ಟಿತು ಆ ಭಾಗದ ಅನುಸಾರ ಬೇರೆ-ಬೇರೆಯಾಗಿ ಹೇಳಲಾಗಿದೆ. ಅಟ್ಲಾಂಟಿಕ್‌ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾದರೆ ಅದು ಹರಿಕೇನ್‌ ಫೆಸಿಫಿಕ್‌ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾದರೆ ಅದು ಟೈಫೂನ್‌ ಹಿಂದೂ ಮಹಾಸಾಗರದಲ್ಲಿ ಉಂಟಾದರೆ ಅದು ಸೈಕ್ಲೋನ್‌ ಎಂದು ಕರೆಯುತ್ತಾರೆ.

ಚಂಡಮಾರುತಕ್ಕೆ ಹೆಸರಿಡುವವರು ಯಾರು? ವಿಶ್ವ ಹವಾಮಾನ ಸಂಸ್ಥೆಯ ಅಡಿಯಲ್ಲಿ ಬರುವ 11 ಹವಾಮಾನ ಮುನ್ನೆಚ್ಚರಿಕಾ ಕೇಂದ್ರಗಳಿಗೆ ಹೆಸರನ್ನು ಸೂಚಿಸಲು ಅನುಮತಿ ಇರುತ್ತದೆ, ಅವೆಲ್ಲವನ್ನೂ ಜಾಗತಿಕ ಹವಾಮಾನ ಸಂಘಟನೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿ(ಆಗ್ನೇಯ ಪೆಸಿಫಿಕ್‌)ಯ ಅಂತಿಮ ಒಪ್ಪಿಗೆಗೆ ಸಲ್ಲಿಸಬೇಕಾಗುತ್ತದೆ. ಈ ಸಮಿತಿಗೆ ಶಿಫಾರಸನ್ನು ಒಪ್ಪುವ, ತಿರಸ್ಕರಿಸುವ, ಬೇರೆಯದೇ ಹೆಸರು ಸೂಚಿಸುವ ಅಧಿಕಾರ ಹೊಂದಿದೆ.

ಚಂಡಮಾರುತಕ್ಕೆ ಹೆಚ್ಚಾಗಿ ಸ್ತ್ರೀ ಹೆಸರೇ ಏಕೆ ? ಎರಡನೇ ಮಹಾ ಯುದ್ಧದ ಸಮಯದಲ್ಲಿ ಸುಮಾರು 1950 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಮಿಲಿಟರಿ ಹವಾಮಾನ ತಜ್ಞ ಮೊದಲ ಬಾರಿಗೆ ಮಹಿಳೆಯರ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲು ಆರಂಭಿಸಿದರು. 60 ಮತ್ತು 70ರ ದಶಕದಲ್ಲಿ ಹಲವಾರು ಮಹಿಳಾ ಹಕ್ಕುಗಳ ಸಂಘಟನೆಗಳು ಪ್ರತಿಭಟನೆ ನಡೆಸಿದ ಫಲವಾಗಿ 1978ರಲ್ಲಿ ಚಂಡಮಾರುತಗಳಿಗೆ ಮಹಿಳೆಯರ ಜೊತೆಗೆ ಪುರುಷ ಹೆಸರುಗಳನ್ನೂ ಇಡುವುದು ರೂಢಿಗೆ ಬಂತು. ಅಟ್ಲಾಂಟಿಕ್ ಹರಿಕೇನ್ ಹೆಸರುಗಳ ಪಟ್ಟಿಗೆ ಪುರುಷರ ಹೆಸರುಗಳು ಸೇರಿಕೊಂಡವು.

ಮುಂಗಾರಿನ ಪ್ರಾರಂಭದಲ್ಲಿ ಚಂಡಮಾರುತ ಬಂದರೆ ಅದಕ್ಕೆ ಸಾಮಾನ್ಯವಾಗಿ ಹೆಣ್ಮಕ್ಕಳ ಹೆಸರೇ ಇಟ್ಟಿರುತ್ತಾರೆ. ಸಮ ಸಂಖ್ಯೆಯಿಂದ ಕೊನೆಯಾಗುವ ವರ್ಷದಲ್ಲಿ ಬೆಸ ಸಂಖ್ಯೆಯ ಚಂಡಮಾರುತಗಳಿಗೆ ಗಂಡಿನ ಹೆಸರು ಬೆಸ ಸಂಖ್ಯೆಯಿಂದ ಕೊನೆಯಾಗುವ ವರ್ಷದಲ್ಲಿ ಸಮ ಸಂಖ್ಯೆಯ ಚಂಡಮಾರುತಗಳಿಗೆ ಹೆಣ್ಮಕ್ಕಳ ಹೆಸರು ಇಡುವುದು ರೂಢಿ.

Leave a Reply

Your email address will not be published. Required fields are marked *