ನಿನ್ನೆ(ಜೂ.16) ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹೇಮಂತ್ ಅಲಿಯಾಸ್ ಸ್ವಾಮಿ(23) ಎಂಬಾತನನ್ನ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ (Murder) ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂಗಿಯ ವಿಷಯವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ

ಕೊಲೆಯಾದ ಹೇಮಂತ್​, ಆರೋಪಿ ಸಾಗರ್​

ಮೈಸೂರು: ನಿನ್ನೆ(ಜೂ.16) ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹೇಮಂತ್ ಅಲಿಯಾಸ್ ಸ್ವಾಮಿ(23) ಎಂಬಾತನನ್ನ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ (Murder) ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂಗಿಯ ವಿಷಯವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಹೌದು ಕೊಲೆಯಾದ ಯುವಕನ ತಂಗಿ, ಆರೋಪಿ ಸಾಗರ್​ನನ್ನು 5 ವರ್ಷ ಪ್ರೀತಿ ಮಾಡಿ ತಾಳಿ ಕಟ್ಟಿಸಿಕೊಂಡು, ನಂತರ ಇಷ್ಟವಿಲ್ಲ ಎಂದಿದ್ದಳು. ಮದುವೆ ನಂತರವೂ ಪ್ರೀತಿ ಮಾಡಿದವಳು ಸಿಗದ ಕೋಪದಲ್ಲಿ ಸಾಗರ್​ ಜೊತೆಗೆ ತನ್ನ ಸ್ನೇಹಿತರಾದ ಪ್ರತಾಪ್, ಮಂಜು ಎಂಬುವವರು ಸೇರಿ ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

15 ದಿನಗಳ ಹಿಂದೆ ಓಡಿ ಹೋಗಿ ಮದುವೆ ಆಗಿದ್ದ ಜೋಡಿ

ಕೊಲೆಯಾದ ಹೇಮಂತ್ ಅಲಿಯಾಸ್ ಸ್ವಾಮಿಯ ಜೊತೆ ಆರೋಪಿ ಸಾಗರ್ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ.​ಈ ವೇಳೆ ಇಂಜಿನಿಯರಿಂಗ್ ಓದುತ್ತಿದ್ದ ಸ್ವಾಮಿ ತಂಗಿ ಜೊತೆ ಪ್ರೇಮಾಂಕುರ ಆಗಿದ್ದು, 5 ವರ್ಷದಿಂದ ಪ್ರೀತಿಸುತ್ತಿದ್ದರು. ಬಳಿಕ ಹುಡುಗಿ ಮನೆಯವರ ವಿರೋಧದ ನಡುವೆಯು 15 ದಿನಗಳ ಹಿಂದೆ ಓಡಿ ಹೋಗಿ ಮದುವೆ ಕೂಡ ಆಗಿ, ನಂತರ ವಾಪಸ್ಸಾಗಿದ್ದರು. ಇದಾದ ಬಳಿಕ ಹುಡುಗಿ ರಿಟರ್ನ್​ ಹೊಡೆದಿದ್ದು, ಸಾಗರ್ ನನ್ನನ್ನು ಬಲವಂತವಾಗಿ ಮದುವೆ ಆಗಿದ್ದಾನೆಂದು ಆರೋಪಿಸಿ, ಪೊಲೀಸ್ ಠಾಣೆಯಲ್ಲೂ ಸಾಗರ್ ಬೇಡ ಎಂದಿದ್ದಳು.

ಕಟ್ಟಿದ್ದ ತಾಳಿ ಕಿತ್ತು ಹಾಕಿದ್ದ ಸಹೋದರ ಸ್ವಾಮಿ

ಇನ್ನು ಮೃತ ಹೇಮಂತ್ ಅಲಿಯಾಸ್ ಸ್ವಾಮಿ ಸಾಗರ್​ ಕಟ್ಟಿದ್ದ ತಾಳಿಯನ್ನ ಕಿತ್ತು ಹಾಕಿದ್ದನು. ಇದರಿಂದ ಸಹೋದರ ಸ್ವಾಮಿ ಮೇಲೆ ಕೋಪಗೊಂಡಿದ್ದ ಸಾಗರ್​​ ಸ್ನೇಹಿತರ ಜೊತೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದ. ಹೌದು ರಾತ್ರಿ ಬೈಕ್‌ನಲ್ಲಿ ಬರುತ್ತಿದ್ದ ಸ್ವಾಮಿಯನ್ನು ಸಾಗರ್ ತನ್ನ ಸ್ನೇಹಿತರಾದ ಪ್ರತಾಪ್ ಹಾಗೂ ಮಂಜು ಜೊತೆ ಸೇರಿ ಅಡ್ಡ ಹಾಕಿದ್ದ. ಈ ವೇಳೆ ಸ್ವಾಮಿ ಹಾಗೂ ಸಾಗರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದರಿಂದ ಆಕ್ರೋಶಗೊಂಡ ಸಾಗರ್, ಸ್ವಾಮಿಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಕೆಳಗೆ ಬಿದ್ದ ಸ್ವಾಮಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Leave a Reply

Your email address will not be published. Required fields are marked *