Upasana Kamineni Net Worth Rs 1,370 Cr: ಟಾಲಿವುಡ್ ಸೂಪರ್ಸ್ಟಾರ್ ಚಿರಂಜೀವಿ ಮಗ ರಾಮಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಒಟ್ಟು ಆಸ್ತಿ ಸದ್ಯ 1,370 ಕೋಟಿ ರೂ. ಇವರು ಇಷ್ಟೊಂದು ಆಸ್ತಿ ಹೇಗೆ ಸಂಪಾದಿಸಿದರು? ಇವರ ಹಿನ್ನೆಲೆ ಏನು?
ಹೈದರಾಬಾದ್: ತೆಲುಗು ಸಿನಿಮಾ ನೋಡುವವರಿಗೆ ಹೆಸರು ಚಿರಪರಿಚಿತ. ಅಪ್ಪ ಚಿರಂಜೀವಿ ಅವರಂತೆ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿ ರಾಮ್ ಚರಣ್ (Ram Charan) ಇದ್ದಾರೆ. ಆರ್ಆರ್ಆರ್ ಸಿನಿಮಾ ಮೂಲಕ ಜೂನಿಯರ್ ಎನ್ಟಿಆರ್ ಜೊತೆ ರಾಮಚರಣ್ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅತಿಹೆಚ್ಚು ಸಂಭಾವಣೆ ಪಡೆಯುವ ನಟರಲ್ಲಿ ಅವರೂ ಒಬ್ಬರು. ಚಲನಚಿತ್ರಗಳ ಮೂಲಕವೇ ಸಾವಿರಕ್ಕೂ ಹೆಚ್ಚು ಕೋಟಿ ರೂಗಳ ಸಂಪಾದನೆ ಮಾಡಿದ್ದಾರೆ ರಾಮಚರಣ್. ಈಗ ಅವರ ಪತ್ನಿ ಕೂಡ ಆಸ್ತಿಸಂಪಾದನೆಯಲ್ಲಿ ರಾಮಚರಣ್ಗೆ ಸರಿಸಮಾನವಾಗಿದ್ದಾರೆ. ರಾಮ್ ಚರಣ್ ಪತ್ನಿ (Upasana Kamineni) ಹೊಂದಿರುವ ಆಸ್ತಿಮೌಲ್ಯ 1,370 ಕೋಟಿ ರೂ. ಈ ಜೋಡಿಗಳ ಆಸ್ತಿ ಸೇರಿಸಿದರೆ 2,500 ಕೋಟಿಗೂ ಹೆಚ್ಚಾಗುತ್ತದೆ.
ರಾಮಚರಣ್ ಪತ್ನಿ ಉಪಾಸನಾ ಕಾಮಿನೇನಿ ಯಾರು?
ಉಪಾಸನಾ ಕಾಮಿನೇನಿ ಉದ್ಯಮ ಕುಟುಂಬದ ಹಿನ್ನೆಲೆಯವರು ಎಂಬುದು ಇಲ್ಲಿ ಗಮನಾರ್ಹ. ಇವರ ತಾತ ಪ್ರತಾಪ್ ಸಿ ರೆಡ್ಡಿ. ಇವರ ಸಾಧನೆ ಬಗ್ಗೆ ಟಿವಿ9 ಕನ್ನಡ ಜಾಲತಾಣದಲ್ಲಿ ಹಿಂದೊಮ್ಮೆ ವರದಿ ಪ್ರಕಟಿಸಿದ್ದೆವು. ಇವರುದ ಸಂಸ್ಥಾಪಕರು. ಪ್ರತಾಪ್ ರೆಡ್ಡಿಯ ಮಗಳ ಮಗಳು ಉಪಾಸನಾ ಕಾಮಿನೇನಿ. ಅಪೋಲೋ ಆಸ್ಪತ್ರೆಯ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಆಗಿರುವ ಶೋಭನಾ ಈಕೆಯ ತಾಯಿ. ಉಪಾಸನಾ ಕೂಡ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆಯಾಗಿದ್ದಾರೆ. ಅಷ್ಟೇ ಅಲ್ಲ ಹಲವು ಕಂಪನಿಗಳಲ್ಲಿ ಅವರು ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿದ್ದಾರೆ