ಈ ಬಾರಿ ಮಳೆ ಕೈಕೊಟ್ಟರೆ ತಲೆದೋರಬಹುದಾದ ಸಂಕಷ್ಟವನ್ನು ರಾಜ್ಯ ಸರ್ಕಾರ ಎದುರಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರು: ಅನ್ನಭಾಗ್ಯ ಯೋಜನೆ (Anna Bhagya) ಜಾರಿಗೆ ತಡವಾಗುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಕಳವಳಗೊಳಿಸಿದೆ. ಕೇಂದ್ರ ಮತ್ತು ಅದರ ಏಜೆನ್ಸಿಗಳಿಂದ ಅಕ್ಕಿ ಸಿಗುವ ಭರವಸೆ ಬತ್ತಿ ಹೋಗಿದೆ. ರಾಜ್ಯದಲ್ಲಿ ಅಕ್ಕಿಯ ಜೊತೆ ರಾಗಿ ಮತ್ತು ಜೋಳದ ದಾಸ್ತಾನು ಕೂಡ ಇಲ್ಲ. ಹಳೆ ಮೈಸೂರು ಭಾಗದ ಬಿಪಿಎಲ್ ಕುಟುಂಬಗಳಿಗೆ ತಲಾ 2 ಕೆಜಿ ರಾಗಿ ಮತ್ತು ಉತ್ತರ ಕರ್ನಾಟಕದ ಕುಟುಂಬ ತಲಾ 2 ಕೆಜಿಯಂತೆ ಜೋಳ ವಿತರಿಸಿದರೂ ಕೇವಲ 6 ತಿಂಗಳಿಗಳಿಗೆ ಸಾಕಾಗಿವಷ್ಟು ದಾಸ್ತಾನು (stocks) ಮಾತ್ರ ಇದೆ ಎಂದು ಮುಖ್ಯಮಂತ್ರಿ ಹೇಳಿದರು. ಅಷ್ಟಾಗಿಯೂ ಉಳಿದ 3 ಕೆಜಿ ಅಕ್ಕಿ ವಿತರಿಸಲಾಗದ ಸ್ಥಿತಿಯಲ್ಲಿದ್ದೇವೆ ಅಂತ ಸಿದ್ದರಾಮಯ್ಯ ಹತಾಷೆ ವ್ಯಕ್ತಪಡಿಸಿದರು. ಮುಕ್ತ ಮಾರುಕಟ್ಟೆಯಲ್ಲಿ (open market) ಅಕ್ಕಿ ಕೊಳ್ಳಬೇಕೆಂದರೆ ಅದಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕು, ಹಾಗಾಗಿ ಅದಕ್ಕೆ ಸಮಯ ಹಿಡಿಯಲಿದೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು. ಈ ಬಾರಿ ಮಳೆ ಕೈಕೊಟ್ಟರೆ ತಲೆದೋರಬಹುದಾದ ಸಂಕಷ್ಟವನ್ನು ರಾಜ್ಯ ಸರ್ಕಾರ ಎದುರಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದರು.