ತೀಸ್ತಾ ನದಿಯ ನೀರಿನ ಮಟ್ಟದಲ್ಲಿ ದೀಢೀರ್ ಏರಿಕೆಯಾಗಿದ್ದಿರಿಂದ ಉಂಟಾದ ಪ್ರವಾಹದಿಂದ 23 ಯೋಧರು ನಾಪತ್ತೆಯಾಗಿರುವ ಘಟನೆ ಸಿಕ್ಕಿಂನಲ್ಲಿ ಸಂಭವಿಸಿದೆ.
ಲ್ಯಾಂಚನ್ ಕಣಿವೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ ದಢೀರನೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದ ರಸ್ತೆಗಳು ಹೊಳೆಯಾಗಿದ್ದು, ಸೇನಾ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಉತ್ತರ ಸಿಕ್ಕಿಂನ ಲೋನಾಕ್ ಸರೋವರದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ದಿಢೀರನೆ ಜಲಾಶಯ ಮಟ್ಟದಲ್ಲಿ ಶೇ.14ರಿಂದ 20ರಷ್ಟು ನೀರು ಏರಿಕೆಯಾಗಿದೆ. ಇದರಿಂದ ನದಿ ಉಕ್ಕಿ ಹರಿದಿದ್ದರಿಂದ ಪ್ರವಾಹ ಉಂಟಾಗಿದೆ.
ಪಶ್ಚಿಮ ಬಂಗಾಳದಿಂದ ಸಿಕ್ಕಿಂಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೧೦ರ ಹಲವು ಭಾಗಗಳು ಕೊಚ್ಚಿ ಹೋಗಿವೆ. ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಅನೇಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಸಿಕ್ಕಿಂ ಸರ್ಕಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ತೀಸ್ತಾ ನದಿಯಿಂದ ದೂರ ತೆರಳುವಂತೆ ಕೇಳಿಕೊಂಡಿದೆ.
ಮೇಘಾಸ್ಫೋಟದಿಂದ ಲೋನಾಕ್ ನದಿಯ ನೀರಿ ನೀರಿನ ಮಟ್ಟ ಸೆಕೆಂಡ್ ಗೆ 15 ಮೀ.ನಷ್ಟು ಏರಿಕೆಯಾಗಿದೆ. ಇದರಿಂದ ಮಂಗಮ್, ಪಾಕ್ ಯಾಂಗ್, ನಮಾಚಿ ಜಿಲ್ಲೆಗಳಲ್ಲಿ ಕೂಡ ಪ್ರವಾಹ ಪರಿಸ್ಥಿತಿ ರಸ್ತೆಗಳು ಹಾನಿಯಾಗಿದ್ದರಿಂದ ಸಂಪರ್ಕ ಕಡಿತ ಭೀತಿ ಎದುರಿಸುತ್ತಿವೆ.