ಬೆಂಗಳೂರಿನ ಕೋರಮಂಗಲದ ಬಹುಮಹಡಿ ಕಟ್ಟಡದಲ್ಲಿ ಭಾರೀ ಸ್ಫೋಟವುಂಟಾಗಿದ್ದು, ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಕೋರಮಂಗಲದ ಮಡ್ ಪೈಪ್ ಕಟ್ಟಡದ ಮೇಲಂತಸ್ತಿನಲ್ಲಿ ಮಂಗಳವಾರ ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.
ಮಹಡಿ ಮೇಲೆ 5 ಸಿಲಿಂಡರ್ ಇರಿಸಲಾಗಿತ್ತು. ಇದು ಸ್ಫೋಟಗೊಂಡಿದ್ದರಿಂದ ಅನಾಹುತ ಸಂಭವಿಸಿದ್ದು, ಕಟ್ಟಡಕ್ಕೆ ಭಾರೀ ಹಾನಿಯಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಕಟ್ಟಡದಲ್ಲಿ ನಡೆಸಲಾಗುತ್ತಿದ್ದ ಪಬ್ ನ ಅಡುಗೆ ಮನೆಯಲ್ಲಿ ಮೊದಲ ಬಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಇಡೀ ಪ್ಲೋರ್ ಸುಟ್ಟು ಕರಕಲಾಗಿದ್ದು, ದಟ್ಟವಾದ ಹೊಗೆಯಿಂದ ನೆರೆಹೊರೆ ಕಟ್ಟಡದಲ್ಲಿನ ಜನರು ಹೊರ ಬಂದಿದ್ದಾರೆ.