ವಿದ್ಯುತ್ ಕೊರೆತೆಯಿಂದ ಏತನೀರಾವರಿ ಯೋಜನೆಗಳು ಬಂದಾಗುತ್ತಿವೆ, ಯಾವುದೇ ಮೂಲದಿಂದ ವಿದ್ಯುತ್ ಉತ್ಪಾದಿಸಿ 7 ಗಂಟೆ ವಿದ್ಯುತ್ ಪೂರೈಸಬೇಕು ಎಂದು ಸಚಿವ ಪಾಟೀಲ ಅವರಿಗೆ ಮನವಿ ಮಾಡಿಕೊಂಡರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದಲ್ಲಿ 10 ಸಾವಿರ ಮೆಗಾ ವಿದ್ಯುತ್ ಬೇಡಿಕೆ ಇತ್ತು ಆದರೆ ಈ ವರ್ಷ 16 ಸಾವಿರ ಮೆಗಾ ವಿದ್ಯುತ್ ಬೇಡಿಕೆ ಇದೆ, ಆದರೆ ಈ ವರ್ಷ ಕಡಿಮೆ ಮಳೆಯಾಗಿದ್ದರಿಂದ 5ರಿಂದ 6 ಸಾವಿರ ಮೆಗಾ ವಿದ್ಯುತ್ ಉತ್ಪಾದನೆಯಾಗುತ್ತಿದೆ, ಅದರಲ್ಲಿ ರೈತರ ಪಂಪಸೆಟ್ಗಳಿಗೆ ಶೇ.80 ರಷ್ಟು ವಿದ್ಯುತ್ ನೀಡಬೇಕು0 ಆದರೂ ಹೊರಗಡೆಯಿಂದ ವಿದ್ಯುತ್ ಆಮದು ಮಾಡಿಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ,
ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 850 ಮೆಗಾ ವಿದ್ಯುತ್ ಖರಿದಿ ಮಾಡಲಾಗುವುದು ಎಷ್ಟೆ ಖರ್ಚಾದರು ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.